“ಪ್ರಯಾಣಿಕರು ಹಳದಿ ಲೈನ್ ಹಿಂದೆ ನಿಂತು ರೈಲು ಬರುವವರೆಗೆ ಕಾಯಬೇಕಾಗಿ ವಿನಂತಿ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ದಯವಿಟ್ಟು ಸೀಟುಗಳನ್ನು ಬಿಟ್ಟು ಕೊಡಿ. ದಯವಿಟ್ಟು ಬಾಗಿಲುಗಳಿಗೆ ಒರಗಿ ನಿಲ್ಲಬೇಡಿ. ನಿಮ್ಮ ಸುರಕ್ಷತೆಗಾಗಿ ನಿಮ್ಮ ಬ್ಯಾಗ್ ಗಳನ್ನು ಹಿಡಿದುಕೊಳ್ಳಿ.” ನೀವು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರೆ ಇಂತಹ ಘೋಷಣೆಗಳನ್ನ ಕೇಳೋದು ಸಾಮಾನ್ಯ. ಆದರೆ ಮೆಟ್ರೋದಲ್ಲಿ ಹಾಡು ಕೇಳಿದ್ದೀರಾ? ಈ ಮಾತು ನಿಮ್ಮನ್ನ ಅಚ್ಚರಿಸಿಗೊಳಿಸಿದ್ರು ದೆಹಲಿ ಮೆಟ್ರೋದಲ್ಲಿ ಇಂತಹ ಸಂದರ್ಭ ಘಟಿಸಿದೆ.
ಘೋಷಣೆಯ ಬದಲು ಹರಿಯಾಣವಿ ಹಾಡನ್ನು ಮೆಟ್ರೋದಲ್ಲಿ ಕೆಲ ಕ್ಷಣಗಳ ಕಾಲ ಪ್ಲೇ ಮಾಡಲಾಗಿದೆ. ಹರಿಯಾಣವಿ ಹಾಡು ‘2 ನಂಬರಿ’ ಪ್ಲೇ ಆದ ಕ್ಷಣಕ್ಕೆ ಸಾಕ್ಷಿಯಾಗಿ ಪ್ರಯಾಣಿಕರು ಆಶ್ಚರ್ಯಚಕಿತರಾದರು. ಚಾಲಕ ಆಕಸ್ಮಿಕವಾಗಿ ಹೀಗೆ ಮಾಡಿರಬಹುದು ಎಂಬ ಆರೋಪವಿದೆ.
ಹಾಡು ಶುರುವಾದಾಗ ಕೋಚ್ ಒಳಗೆ ನಿಂತಿದ್ದವರು ನಗತೊಡಗಿದರು. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ ಅಮನ್‌ದೀಪ್ ಸಿಂಗ್ ಅವರ “ನಾನು ದೆಹಲಿಯನ್ನು ಏಕೆ ಪ್ರೀತಿಸುತ್ತೇನೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಈ ಕ್ಲಿಪ್ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಟ್ವಿಟರ್ ಬಳಕೆದಾರರಲ್ಲೊಬ್ಬರು ಮೆಟ್ರೋ ಡ್ರೈವರ್ ಹರಿಯಾಣದವರಿರಬಹುದು ಎಂದು ತಮಾಷೆ ಮಾಡಿದ್ದಾರೆ.