ಸೂಪರ್ ಲಕ್ಸೂರಿ ವಾಹನ ನಿಸ್ಸಾನ್ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಈ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆಯುವ ಸ್ಪಷ್ಟೀಕರಣ ನೀಡಿದ್ದಾರೆ.
ಸಂಪೂರ್ಣ ಮರು ನಿರ್ಮಾಣ ಕಂಡ ಈ ಕಾರು ತಮ್ಮದೋ ಅಲ್ಲವೋ ಎಂದು ಸ್ಪಷ್ಟ ಪಡಿಸಲು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಸೂರ್ಯ ಕುಮಾರ್, “ಸಾರಿ ಗಾಯ್ಸ್. ಈ ಕಾರು ಈಗ ನನ್ನದಾಗಿ ಉಳಿದಿಲ್ಲ. ಇದನ್ನು ಕಂಡಾಗ ನನ್ನನ್ನು ಟ್ಯಾಗ್ ಮಾಡಬೇಡಿ,” ಎಂದಿದ್ದಾರೆ. “ಆದರೆ, ಕ್ರೇಜ಼ಿಯಾದ ವಿಚಾರವೊಂದಕ್ಕೆ ಕಾಯುತ್ತಿರಿ,” ಎಂದು ಇದೇ ವೇಳೆ ಅಭಿಮಾನಿಗಳಿಗೆ ತಿಳಿಸಿದ್ದಾರೆ ಯಾದವ್.
1960ರ ದಶಕದಲ್ಲಿ ಬಹಳ ಜನಪ್ರಿಯವಾಗಿದ್ದ ನಿಸ್ಸಾನ್ 1 ಟನ್ ಅನ್ನು ಭಾರತೀಯ ಸೇನೆಯಲ್ಲಿ ಬಳಸಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಮಹಿಂದ್ರಾ ಜೀಪುಗಳು ಈ ವಾಹವನ್ನು ಹಿಂದಕ್ಕೆ ಸರಿಸಿದವು. ಇದೇ ಫೆಬ್ರವರಿಯಲ್ಲಿ ತಮ್ಮ ನಿಸ್ಸಾನ್ 1 ಟನ್ ಕಾರಿನೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಸೂರ್ಯ ಕುಮಾರ್, ಅದನ್ನು ತಮ್ಮ ಹೊಸ ಆಟಿಕೆ ಎಂದಿದ್ದರು
ತಮ್ಮ ಈ 1 ಟನ್ ಕಾರಿಗೆ ಬಣ್ಣ, ಗಾಜಿನ ಪ್ಯಾನೆಲ್ಗಳು, ಗ್ರಿಲ್, ಹೆಡ್ಲ್ಯಾಂಪ್ ಕವರ್ಗಳು ಸೇರಿದಂತೆ ಸಂಪೂರ್ಣವಾದ ಮರುವಿನ್ಯಾಸ ಮಾಡಿಸಿದ್ದರು ಸೂರ್ಯ.
ಟೀಂ ಇಂಡಿಯಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಸಹ ಇಂಥದ್ದೇ ವಾಹನವನ್ನು ಹೊಂದಿದ್ದಾರೆ.