HomeKarnatakaBIG NEWS: ಹೊಡಿ ಬಡಿ ಅನ್ನುವುದು ಕಾಂಗ್ರೆಸ್ ಸಂಸ್ಕೃತಿ; ಶಾಸಕ ಬೆಲ್ಲದ್ ವಾಗ್ದಾಳಿ

BIG NEWS: ಹೊಡಿ ಬಡಿ ಅನ್ನುವುದು ಕಾಂಗ್ರೆಸ್ ಸಂಸ್ಕೃತಿ; ಶಾಸಕ ಬೆಲ್ಲದ್ ವಾಗ್ದಾಳಿ

ಹುಬ್ಬಳ್ಳಿ: ಮೀಸಲಾತಿ ವಿಚಾರದಲ್ಲಿ ಶ್ರೀಗಳಿಗೆ ಕರೆ ಮಾಡಿ ಒತ್ತಡ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ಹೊಡಿ ಬಡಿ ಎನ್ನುವುದು ಕಾಂಗ್ರೆಸ್ ಸಂಸ್ಕೃತಿ, ಬೆದರಿಕೆ ಹಾಕುವ ಅಗತ್ಯ ಬಿಜೆಪಿ ಸರ್ಕಾರಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ್ ಬೆಲ್ಲದ್, ನಮ್ಮದು ಬೆದರಿಕೆ ಹಾಕುವ ಸಂಸ್ಕೃತಿ ಅಲ್ಲ, ಹೊಡಿ ಬಡಿ ಕಡಿ ಅನ್ನೋದು ಕಾಂಗ್ರೆಸ್ ಸಂಸ್ಕೃತಿ. ಶ್ರೀಗಳಿಗೆ ಬೆದರಿಕೆ ಹಾಕುವ ಮನಃಸ್ಥಿತಿ ಇರುವುದು ಕಾಂಗ್ರೆಸ್ ನವರಿಗೆ. ಸ್ವಾಮೀಜಿಗಳ ಮೇಲೆ ಬಿಜೆಪಿ ಸರ್ಕಾರಕ್ಕೆ ಅಪಾರ ಗೌರವವಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರದ ಮೀಸಲಾತಿ ನಿರ್ಧಾರದಿಂದ ಕಾಂಗ್ರೆಸ್ ನವರು ಕಂಗೆಟ್ಟಿದ್ದಾರೆ. ಸರ್ಕಾರ ಮೀಸಲಾತಿ ಕೊಡುತ್ತೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ಇದನ್ನು ನೋಡಿ ಕಾಂಗ್ರೆಸ್ ನಾಯಕರಿಗೆ ಸಿಡಿಲು ಬಡಿದಂತಾಗಿದೆ. ಹಾಗಾಗಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

For Latest News Updates, Join Our Whatsapp Community🚩
RELATED ARTICLES

Most Popular