ಜರ್ಮನಿಯಲ್ಲಿ ಕಳೆದೊಂದು ತಿಂಗಳಲ್ಲಿ ಎರಡನೇ ಬಾರಿಗೆ ಗುಂಡಿನ ದಾಳಿಯಾಗಿದ್ದು ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಹ್ಯಾಂಬರ್ಗ್‌ನಲ್ಲಿ ಗುಂಡಿನ ದಾಳಿಯ ನಂತರ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಜರ್ಮನಿಯ ಬಿಲ್ಡ್ ಪತ್ರಿಕೆ ವರದಿ ಮಾಡಿದೆ. ಘಟನೆ ನಡೆದ
ಮಧ್ಯರಾತ್ರಿಯ ವೇಳೆ 28 ಪೊಲೀಸ್ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿವೆ.
ಈ ತಿಂಗಳ ಆರಂಭದಲ್ಲಿ, ಹ್ಯಾಂಬರ್ಗ್‌ನಲ್ಲಿರುವ ಜೆಹೋವನ್ಸ್ ವಿಟ್ ನೆಸ್ ಸೆಂಟರ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶಂಕಿತ ಬಂದೂಕುಧಾರಿ ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.