ನಂಬಲಸಾಧ್ಯವಾದ ಸ್ಟಂಟ್‌ಗಳ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಬರವಿಲ್ಲ. ಆದರೆ ಕೆಲವೊಮ್ಮೆ ಸ್ಟಂಟ್‌ಗಳನ್ನು ಮಾಡಲು ಹೋಗಿ ವಿಫಲರಾಗುವ ಬ್ಲೂಪರ್ ವಿಡಿಯೋಗಳೂ ಸಹ ಅಷ್ಟೇ ವೈರಲ್ ಆಗುತ್ತವೆ.
’ಎಪಿಕ್ ಫೇಲ್ಸ್’ ಎಂಬ ಕ್ಯಾಪ್ಷನ್‌ನೊಂದಿಗೆ ಇಂಥ ಕೆಲ ವಿಡಿಯೋಗಳನ್ನು ಶೇರ್ ಮಾಡಲಾಗುತ್ತದೆ.
ಇಂಥದ್ದೇ ಒಂದು ವಿಡಿಯೋದಲ್ಲಿ ಮರದ ಕೊಂಬೆಯೊಂದರ ಮೇಲೆ ಸ್ಟಂಟ್ ಮಾಡುತ್ತಿದ್ದ ಮಹಿಳೆಯೊಬ್ಬರು ಆಯ ತಪ್ಪಿ ನೆಲಕ್ಕೆ ಬೀಳುತ್ತಿರುವುದನ್ನು ನೋಡಬಹುದಾಗಿದೆ. ಮರದ ಕೊಂಬೆಯ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಸ್ಟಂಟ್ ಮಾಡಲು ಮುಂದಾದ ಈ ಅಥ್ಲೀಟ್, ಎರಡನೇ ಪೋಸ್ ನೀಡಲು ಸಜ್ಜಾಗುತ್ತಿದ್ದಂತೆಯೇ, ಆಕೆಯ ಭಾರ ತಾಳಲಾರದೇ ಕೊಂಬೆ ಮುರಿದ ಕಾರಣ ನೆಲಕ್ಕೆ ಬೀಳುತ್ತಾರೆ.
ಈ ವಿಡಿಯೋ ಕ್ಲಿಪ್‌ಗೆ 2.98 ಲಕ್ಷ ವೀಕ್ಷಣೆಗಳು ಸಿಕ್ಕಿದ್ದು, ಟ್ವೀಟ್‌ಗೆ ನಾಲ್ಕು ಲಕ್ಷ ವೀಕ್ಷಣೆಗೆಳಿ ಸಿಕ್ಕಿವೆ. ವಿಡಿಯೋ ಕುರಿತು ಕಾಮೆಂಟ್ ವಿಭಾಗದಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಚರ್ಚಿಸಿದ್ದಾರೆ.
https://twitter.com/peoplerepentlng/status/1638502617738526722?ref_src=twsrc%5Etfw%7Ctwcamp%5Etweetembed%7Ctwterm%5E1638835761167609858%7Ctwgr%5E42cc76df366199940731401103dc41d8bcc514b8%7Ctwcon%5Es2_&ref_url=https%3A%2F%2Fwww.news18.com%2Fbuzz%2Fwatch-woman-performing-stunt-on-tree-branch-lands-on-ground-in-epic-fall-7381345.html
https://twitter.com/peoplerepentlng/status/1638851465338036224?ref_src=twsrc%5Etfw%7Ctwcamp%5Etweetembed%7Ctwterm%5E1638851465338036224%7Ctwgr%5E42cc76df366199940731401103dc41d8bcc514b8%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-woman-performing-stunt-on-tree-branch-lands-on-ground-in-epic-fall-7381345.html