ಉದ್ದ ಕೂದಲು ತೆಗೆದುಹಾಕುತ್ತಲೇ ’ಪಠಾಣ್’ ಪ್ರೇಮಿ ಮಗಳ ಪ್ರತಿಕ್ರಿಯೆ ಶೇರ್‌ ಮಾಡಿದ ಪತ್ರಕರ್ತೆ

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ’ಪಠಾಣ್’ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಈಗಲೂ ಸದ್ದು ಮಾಡುತ್ತಿದೆ. ಹಿರಿತೆರೆಗೆ ಶಾರುಖ್ ಮರು ಪ್ರವೇಶವನ್ನು ಜಗತ್ತಿನಾದ್ಯಂತ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಶಾರುಖ್‌ರ ಪಠಾಣ್ ಅವತಾರ ಅಭಿಮಾನಿಗಳ ಮೇಲೆ ಅದೆಷ್ಟು ಮೋಡಿ ಮಾಡಿದೆಯೆಂದರೆ, ಅವರ ಪುಟಾಣಿ ಅಭಿಮಾನಿಗಳೂ ಸಹ ಇದಕ್ಕೆ ಹೊರತಾಗಿಲ್ಲ. ಎರಡು ವರ್ಷದ ಬಾಲಕಿಯೊಬ್ಬಳು ’ಪಠಾಣ್’ ಹುಚ್ಚಿನಲ್ಲಿ ಮುಳುಗಿರುವ ವಿಡಿಯೋವೊಂದನ್ನು ಹಿಮಾನಿ ಧವನ್ ಎಂಬ ಪತ್ರಕರ್ತರೊಬ್ಬರು ಶೇರ್‌ ಮಾಡಿದ್ದಾರೆ.

ತಮ್ಮ ಎರಡು ವರ್ಷದ ಪುತ್ರನ ಪಠಾಣ್ ಪ್ರೇಮವನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ ಧವನ್. ಹಿಂದಿಯಲ್ಲಿ ಬರೆಯಲಾದ ಈ ಕಥೆಯಲ್ಲಿ, “ಡಿಯರ್‌ ಶಾರುಖ್. ಇವಳು ನನ್ನ ಎರಡು ವರ್ಷದ ಮಗಳು. ಇವಳು ಪಠಾಣ್‌ನ ಬಹುದೊಡ್ಡ ಅಭಿಮಾನಿ. ಈಕೆಯ ಕೂದಲು ತೆಗೆದ ಮೇಲೆ ಈ ಪ್ರತಿಕ್ರಿಯೆ ಕೊಟ್ಟಿದ್ದಾಳೆ. ಇದರ ಹಿಂದಿನ ಕಥೆಯನ್ನು ಫೇಸ್ಬುಕ್‌ನಲ್ಲಿ ಬರೆಯುತ್ತಿದ್ದೇನೆ,” ಎಂದು ಖುದ್ದು ತಾವು ತಮ್ಮ ಬಾಲ್ಯದಿಂದ ಶಾರುಖ್‌ರ ದೊಡ್ಡ ಅಭಿಮಾನಿಯಾಗಿ ಬೆಳೆದು, ಪತ್ರಕರ್ತೆಯಾಗಿ ಅವರ ಸಂದರ್ಶನ ಮಾಡಲು ಅವಕಾಶ ಸಿಕ್ಕಾಗ ಆದ ಭಾವನೆಗಳನ್ನು ದೊಡ್ಡದೊಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ ಹಿಮಾನಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read