
ಮದುವೆಗಳು ದುಬಾರಿ ವ್ಯವಹಾರ ಎನಿಸಿದೆ. ಅದಕ್ಕಾಗಿಯೇ ದಂಪತಿಯೊಬ್ಬರು ತಮ್ಮ ಮದುವೆಯ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡು ಈಗ ಟ್ರೋಲ್ಗೆ ಒಳಗಾಗಿದ್ದಾರೆ.
ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ವಧು-ವರರು ತಾವು ಮತ್ತು ಅವರ ಹೊಸ ಪತಿ ಈ ವರ್ಷದ ಕೊನೆಯಲ್ಲಿ ತಮ್ಮ ಮದುವೆಯಲ್ಲಿ ನೀರನ್ನು ಮಾತ್ರ ನೀಡಲಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಮೂಲಕ ತಾವು ”ಡ್ರೈ ಮದುವೆ”ಯನ್ನು ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ವಿದೇಶಗಳಲ್ಲಿ ಮದುವೆಯ ದಿನ ಆಲ್ಕೋಹಾಲ್, ಸೋಡಾ ಕಡ್ಡಾಯ. ಇದನ್ನು ಯಾವುದೂ ತಾವು ನೀಡುವುದಿಲ್ಲ. ಕಾಫಿ ಅಥವಾ ಯಾವುದೇ ಪಾನೀಯ ಕೂಡ ಇರುವುದಿಲ್ಲ. ಬರೀ ನೀರನ್ನು ಮಾತ್ರ ನೀಡುವುದಾಗಿ ಹೇಳಿದ್ದಾರೆ.
ಮದುವೆಯ ಸಂಪೂರ್ಣ ವೆಚ್ಚವನ್ನು ವಧುವಿನ ಅಜ್ಜಿ ಭರಿಸಲಿರುವ ಕಾರಣ, ಮದುವೆಗೆ ಯಾವುದೇ ಖರ್ಚು ಮಾಡುವುದಿಲ್ಲ ಎಂದಿದ್ದಾರೆ. ”ನಮ್ಮ ಕುಟುಂಬದಲ್ಲಿ ನಮಗೆ ಸಾಕಷ್ಟು ಮಕ್ಕಳಿದ್ದಾರೆ, ಎಲ್ಲರನ್ನೂ ಮದುವೆ ಮಾಡಬೇಕಾದ ಜವಾಬ್ದಾರಿ ಅಜ್ಜಿಯ ಮೇಲಿದೆ. ಆದ್ದರಿಂದ ದುಬಾರಿ ಖರ್ಚು ಮಾಡುವುದಿಲ್ಲ. ಹಾಗಾಗಿ ನಮ್ಮ ಮದುವೆಯಲ್ಲಿ ಯಾವುದೇ ರೀತಿಯ ಮದ್ಯ ಇರುವುದಿಲ್ಲ” ಎಂದು ವಧು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ.
ಕೆಲವರು ಇದನ್ನು ಶ್ಲಾಘಿಸಿದರೆ, ಇನ್ನು ಹಲವರು ಇದನ್ನು ಟ್ರೋಲ್ ಮಾಡಿದ್ದಾರೆ. ಹಾಗಿದ್ದರೆ ನಾವು ಯಾಕೆ ಮದುವೆಗೆ ಬರಬೇಕು ಎಂದು ಪ್ರಶ್ನಿಸಿದ್ದಾರೆ.