ಕೆಲವರು ಹಗಲು – ರಾತ್ರಿ ನಿದ್ದೆ ಇಲ್ಲದೆಯೂ ದುಡಿಯುತ್ತಾರೆ. ಅಂಥವರನ್ನು ವೈಭವೀಕರಿಸುವ ಸಂಸ್ಕೃತಿಯೊಂದು ಇತ್ತೀಚೆಗೆ ಹುಟ್ಟಿಕೊಂಡಿದ್ದು, ನೆಟ್ಟಿಗರಿಂದ ತರಾಟೆಗೆ ಒಳಗಾಗಿದೆ.
ಈ ಸಂಸ್ಕೃತಿಯನ್ನು ವೈಭವೀಕರಿಸುವ ಸ್ಟಾರ್ಟ್‌ಅಪ್‌ಗಳು ಮತ್ತು ಅವುಗಳ ಸಿಇಒ ವಿರುದ್ಧ ಜನರು ಆಕ್ರೋಶಗೊಳ್ಳುತ್ತಿದ್ದಾರೆ. ತಮ್ಮ ಉದ್ಯೋಗಿಗಳ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡದೆ ಅವರನ್ನು ದುಡಿಯುವಂತೆ ಉತ್ತೇಜಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ.
30 ದಿನಗಳಲ್ಲಿ ಸರಿಯಾಗಿ ನಿದ್ದೆ ಮಾಡದ ಉದ್ಯೋಗಿಯನ್ನು ಭಾರತೀಯ ಸ್ಟಾರ್ಟ್‌ಅಪ್ ವೈಭವೀಕರಿಸುವುದು ಕಾಣಿಸುತ್ತಿದೆ. ಓರಲ್ ಕೇರ್ ಬ್ರ್ಯಾಂಡ್ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಪಾಲುದಾರ ವೇರ್‌ಹೌಸ್‌ನಲ್ಲಿ ಖಾತೆ ವ್ಯವಸ್ಥಾಪಕ ಕಳೆದ 30 ದಿನಗಳಿಂದ ಅವರು ನಿದ್ದೆ ಮಾಡದೇ ಸಂಪೂರ್ಣ ಆರ್ಡರ್ ಪ್ಯಾಕಿಂಗ್ ಮತ್ತು ರವಾನೆಯನ್ನು ನೋಡಿಕೊಳ್ಳುತ್ತಾರೆ. ಇವರೇ ಹೀರೋಗಳು ಎಂದು ಬರೆದಿದೆ.
ಇದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಅವರು ಅನಾರೋಗ್ಯಪೀಡಿತರಾದರೆ ನೀವು ನೋಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.
https://twitter.com/SatinTweety/status/1637333509286297601?ref_src=twsrc%5Etfw%7Ctwcamp%5Etweetembed%7Ctwterm%5E1637333509286297601%7Ctwgr%5Eea90b87d8c9ef5b522ca574293468da3b7dc5887%7Ctwcon%5Es1_&ref_url=https%3A%2F%2Fwww.news18.com%2Fbuzz%2Findian-startup-flexes-about-employee-who-hardly-slept-in-30-days-gets-slammed-7356601.html