ಉತ್ತರಾರ್ಧ ಗೋಳದಲ್ಲಿ ಬೇಸಿಗೆ ದಿನೇ ದಿನೇ ಚುರುಕಾಗುತ್ತಿದ್ದು ಸಕಲ ಜೀವಿಗಳಿಗೂ ನೀರಡಿಕೆ ಜೋರಾಗುತ್ತಿದೆ. ಈ ಮಾಸದಲ್ಲಿ ಪ್ರಾಣಿಗಳು ಹಾಗೂ ಗಿಡಮರಗಳಿಗೆ ಭಾರೀ ಹಿಂಸೆ ಎನಿಸಬಹುದು.
ನೀರಿನ ಹುಡುಕಾಟದಲ್ಲಿ ಪ್ರಾಣಿಗಳು ತಮ್ಮ ವಾಸಸ್ಥಾನಗಳನ್ನು ಬಿಟ್ಟು ಬರುವುದು ಸಹ ಈ ವೇಳೆ ಸಹಜವೇ ಆಗಿದೆ. ಮಾನವೀಯ ಮಿಡಿತವಿರುವ ಅನೇಕ ಮಂದಿ ತಮ್ಮ ಮನೆಗಳಲ್ಲಿ ಹಕ್ಕಿಗಳಿಗೆಂದು ನೀರು ಇಡುವುದು, ಮನೆ ಮುಂದೆ ಓಡಾಡುವ ಪಶುಗಳಿಗೆ ನೀರು ನೀಡುವುದನ್ನು ಮಾಡುತ್ತಾರೆ.
ಇಲ್ಲೊಬ್ಬ ವ್ಯಕ್ತಿ ಮರಳುಗಾಡಿನಲ್ಲಿ ನೀರು ಸಿಗದೇ ಪರದಾಡುತ್ತಿದ್ದ ಕೊಯೊಟ್ ಒಂದಕ್ಕೆ ಬಾಟಲಿಯಲ್ಲಿ ನೀರುಣಿಸುವ ಮೂಲಕ ಮಾನವೀಯತೆ ಮೆರೆದಿರುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ದಾಹಗೊಂಡಿದ್ದ ಕೊಯೋಟ್ ನೀರು ಸಿಕ್ಕುತ್ತಲೇ ಜೀವ ಬಂದಂತೆ ಆಗಿರುವುದನ್ನು ನೋಡಬಹುದಾಗಿದೆ.