ಸತ್ತಿದ್ದಾನೆ ಎಂದು ಘೋಷಿಸಲ್ಪಟ್ಟ ವ್ಯಕ್ತಿ ಪವಾಡಸದೃಶವಾಗಿ ಎದ್ದು ಬಂದು ಹೇಳಿದ ನರಕ ನೋಡಿದ ಅನುಭವ…!

ಸಾವಿನ ನಂತರದ ಬದುಕು ಹೇಗಿರುತ್ತದೆ ಎಂಬ ಕುತೂಹಲ ಮಾನವನಲ್ಲಿ ಬಹಳ ಹಿಂದಿನದ್ದು. ಈ ಕುರಿತಂತೆ ಬಹುತೇಕ ಎಲ್ಲ ಧರ್ಮಗಳಲ್ಲೂ ಸಹ ವಿವಿಧ ವ್ಯಾಖ್ಯಾಗಳನ್ನು ಬರೆಯಲಾಗಿದೆ. ಇದೇ ವಿಚಾರವಾಗಿ ಅನೇಕ ಕಾಲ್ಪನಿಕ ಚಿತ್ರಗಳು ಬಂದಿದ್ದು ಹಿಟ್ ಕೂಡಾ ಆಗಿವೆ.

ಇಲ್ಲೊಬ್ಬ ವ್ಯಕ್ತಿ ತಾನು ನರಕಕ್ಕೆ ನೇರ ಹೋಗಿ ಅಲ್ಲಿ ದೆವ್ವಗಳನ್ನು ಕಂಡಿದ್ದಾಗಿ ಹೇಳಿಕೊಂಡಿದ್ದಾನೆ. ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ ಈತ ವೈದ್ಯರಿಗೆ ತನ್ನ ’ನರಕ ಭೇಟಿ’ಯ ಅನುಭವವನ್ನು ಹಂಚಿಕೊಂಡಿರುವುದನ್ನು ನೋಡಬಹುದು.

ತನ್ನ 20ರ ಹರೆಯದರಲ್ಲಿರುವ ವ್ಯಕ್ತಿಯೊಬ್ಬ ಹೃದಯದಲ್ಲಿ ಸಮಸ್ಯೆ ಇರುವುದನ್ನು ಕಂಡ ವೈದ್ಯಕೀಯ ಸಿಬ್ಬಂದಿ ಆತನನ್ನು ಉಳಿಸಿಕೊಳ್ಳಲು ತಮಗೆ ತಿಳಿದ ಎಲ್ಲವನ್ನೂ ಮಾಡಿದ್ದಾರೆ. ಆದರೆ ಆತ ಅದೇನೇ ಚಿಕಿತ್ಸೆ ನೀಡಿದರೂ ಉಳಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ವೈದ್ಯರೇ ಘೋಷಿಸಿದ್ದರು. ಆದರೆ ನಾಲ್ಕು ಗಂಟೆಗಳ ಬಳಿಕ ಪವಾಡಸದೃಶವಾಗಿ ಎದ್ದ ಈತ, “ನಾನು ಸೀದಾ ನರಕಕ್ಕೆ ಹೋಗಿದ್ದೆ, ಅಲ್ಲಿ ದೆವ್ವದ ಕಣ್ಣುಗಳನ್ನೇ ದಿಟ್ಟಿಸಿ ನೋಡಿದೆ,” ಎಂದು ಅಳುತ್ತಾ ಹೇಳಿದ್ದಾನೆ.

ಇದೇ ವೇಳೆ ಸ್ವರ್ಗದಿಂದ ಬಂದ ದೇವಕನ್ಯೆಯೊಬ್ಬಳು ತನ್ನನ್ನು ಅಲ್ಲಿಂದ ರಕ್ಷಿಸಿ, ಶಾಶ್ವತ ಚಿತ್ರಹಿಂಸೆಯಿಂದ ತನ್ನನ್ನು ಪಾರು ಮಾಡಿದ್ದಳು ಎಂದು ಆತ ಹೇಳಿಕೊಂಡಿದ್ದಾನೆ. ಆತನ ಕಣ್ಣುಗಳಲ್ಲಿ ಗೋಚರಿಸುತ್ತಿದ್ದ ಭೀತಿಯನ್ನ ಕಂಡ ವೈದ್ಯರು ಆತ ಕಥೆಗಳನ್ನು ಸೃಷ್ಟಿಸಿ ಹೇಳುತ್ತಿದ್ದಾನೆ ಎಂದು ಹೇಳಲಾಗದು ಎಂದಿದ್ದಾರೆ.

ನಾಸ್ತಿಕರು ಹಾಗೂ ವಾಸ್ತವವಾದಿಗಳು ಸ್ವರ್ಗ ನರಕಗಳೆಲ್ಲಾ ಏನೂ ಇಲ್ಲ ಎಂದು ಅದೆಷ್ಟೇ ಹೇಳಿದರೂ ಸಹ ಇಂಥ ಕೆಲವೊಂದು ಘಟನೆಗಳು ಸ್ವರ್ಗ-ಸರಕಗಳ ಇರುವಿಕೆಯ ನಂಬಿಕೆಯನ್ನು ಪದೇ ಪದೇ ಹುಟ್ಟುಹಾಕುತ್ತಲೇ ಬಂದಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read