ತಾಜ್ ಮಹಲ್ ನೋಡಬೇಕೆಂಬ ತನ್ನ ಜೀವಿತದ ಕನಸನ್ನು 85ನೇ ವಯಸ್ಸಿನಲ್ಲಿ ನನಸು ಮಾಡಿಕೊಂಡ ಮಹಿಳೆಯೊಬ್ಬರ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಜರಾತ್‌ನಿಂದ ಬಂದ ಈ ಹಿರಿಯ ಮಹಿಳೆ ತಮ್ಮ ಮಗನೊಂದಿಗೆ ತಾಜ್ ಮಹಲ್ ನೋಡುವ ಕನಸನ್ನು ಈಡೇರಸಿಕೊಂಡಿದ್ದಾರೆ. ಸ್ಟ್ರೆಚರ್‌ನಲ್ಲಿ ಬಂದು ತಾಜ್ ಮಹಲ್ ನೋಡಿದ ಹಿರಿಯ ಮಹಿಳೆಯ ಫೋಟೋವನ್ನು ಪ್ರಿಯಾ ಸಿಂಗ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ತನ್ನ ತಾಯಿಯ ಆಸೆಯನ್ನು ಈಡೇರಿಸಿದ ಮಗನ ಬಗ್ಗೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ.
ಮುಘಲ್ ದೊರೆ ಶಾಹ್ ಜಹಾನ್ ಕಾಲದಲ್ಲಿ ನಿರ್ಮಾಣಗೊಂಡ ತಾಜ್ ಮಹಲ್ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದೆ. ಅಮೃತ ಶಿಲೆಯಿಂದ ರಚಿಸಲ್ಪಟ್ಟ ತಾಜ್ ಮಹಲ್ ಭಾರತದ ಪ್ರವಾಸೋದ್ಯಮದ ಹೆಮ್ಮೆಯ ಸೂಚಕವೂ ಆಗಿದೆ. ಪ್ರತಿ ವರ್ಷ ಈ ಸ್ಮಾರಕ ನೋಡಲು ಲಕ್ಷಾಂತರ ಮಂದಿ ಆಗಮಿಸುತ್ತಾರೆ.