Delhi: ಕಾರಿನಲ್ಲಿ ಮಹಿಳೆ ಎಳೆದೊಯ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್;‌ ಅಂತದ್ದೇನು ನಡೆದೇ ಇಲ್ಲವೆಂದ ಜೋಡಿ

ದೆಹಲಿಯ ಮಂಗೋಲ್ಪುರಿ ಫ್ಲೈಓವರ್‌ ಬಳಿ ಪುರುಷನೊಬ್ಬ ಮಹಿಳೆಯೊಬ್ಬಳನ್ನು ಬಲವಂತವಾಗಿ ಕಾರಿನೊಳಗೆ ಕೂರುವಂತೆ ಮಾಡಿದ ವಿಡಿಯೊ ತುಣುಕೊಂದು ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ಕಂಡ ಈ ವಿಡಿಯೋದಿಂದಾಗಿ ಪೊಲೀಸರು ವಿಚಾರಣೆಗೆ ಮುಂದಾದಾಗ ಅಲ್ಲಿ ಅಸಲಿಗೆ ನಡೆದಿದ್ದೇನೆಂದು ತಿಳಿದು ಬಂದಿದೆ.

ವಿಡಿಯೋದಲ್ಲಿ ಕಂಡ ಮಹಿಳೆ ಹಾಗೂ ಆಕೆಯ ಪತಿಯ ನಡುವಿನ ಅಪಾರ್ಥದಿಂದಾಗಿ ಹೀಗೊಂದು ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಶನಿವಾರದಂದು ವಿಡಿಯೋದಲ್ಲಿ ಕಂಡು ಬಂದ ಮಹಿಳೆ ಹಾಗೂ ಪುರುಷನ ಹೇಳಿಕೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ ದೆಹಲಿ ಪೊಲೀಸರು.

ಮೂವರು ಪುರುಷರು ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಮುಂದಾದ ಪೊಲೀಸರಿಗೆ ಖುದ್ದು ಅದೇ ಮಹಿಳೆ ಸ್ಪಷ್ಟನೆ ಕೊಟ್ಟಿದ್ದು ಆತ ತನ್ನ ಪತಿ ಎಂದು ತಿಳಿಸಿದ್ದಾರೆ.

“ನಾನು ಮತ್ತು ನನ್ನ ಪತಿ ನಡುವೆ ಅಪಾರ್ಥದ ಕಾರಣದಿಂದ ಈ ಘಟನೆ ನಡೆದಿದೆ. ವೈಯಕ್ತಿಕ ಕಾರಣವೊಂದಕ್ಕೆ ನಮ್ಮ ನಡುವೆ ಜಗಳವಾಗಿದೆ. ಬಳಿಕ ನಾವಿಬ್ಬರೂ ಸರಿ ಹೋಗಿದ್ದೇವೆ. ಹೆಣ್ಣು ಮಕ್ಕಳ ರಕ್ಷಣೆಗೆ 24 ಗಂಟೆಯೂ ಲಭ್ಯವಿರುವ ದೆಹಲಿ ಪೊಲೀಸರಿಗೆ ಧನ್ಯವಾದ ಹೇಳಲು ಬಯಸುತ್ತೇನೆ,” ಎಂದು ಅದೇ ಮಹಿಳೆ ಸ್ವಯಂ ವಿಡಿಯೋ ರೆಕಾರ್ಡ್ ಮಾಡಿಕೊಂಡು ಪೋಸ್ಟ್ ಮಾಡಿದ್ದಾರೆ.

https://twitter.com/ANI/status/1638066935911833601?ref_src=twsrc%5Etfw%7Ctwcamp%5Etweetembed%7Ctwterm%5E1638066935911833601%7Ctwgr%5E1f7841207ba2547036e31085c8a69a21c57164c5%7Ctwcon%5Es1_&ref_url=https%3A%2F%2Fwww.indiatoday.in%2Fcities%2Fdelhi%2Fstory%2Fdelhi-news-viral-video-woman-forced-sit-in-car-mangolpuri-fight-personal-reason-2349536-2023-03-21

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read