ದಕ್ಷಿಣ ಭಾರತದ ಖ್ಯಾತ ತಿನಿಸು ದೋಸೆ, ಆಹಾರ ಪ್ರಯೋಗಗಳನ್ನು ಮಾಡಬಯಸುವವರಿಗೆ ಭಾರೀ ಅಚ್ಚುಮೆಚ್ಚಿನ ಐಟಂ ಆಗಿದೆ. 99 ವೆರೈಟಿ ದೋಸೆ ಹೆಸರಿನ ಅಂಗಡಿಗಳನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ.
ಇದೀಗ ಈ ಸಾಂಪ್ರದಾಯಿಕ ಖಾದ್ಯಕ್ಕೆ ಸೂಪರ್ ಹೀರೋ ಟ್ವಿಸ್ಟ್ ಕೊಟ್ಟಿರುವ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ.
ಸ್ಪೈಡರ್‌ಮ್ಯಾನ್‌ನ ಬಲೆಯನ್ನು ದೋಸೆ ಮೇಲೆ ಹಾಕುವ ಮೂಲಕ ದೋಸೆಗೆ ಈ ವಿನೂತನ ಟ್ವಿಸ್ಟ್ ಕೊಟ್ಟಿದ್ದಾರೆ ಈಕೆ.
ಮೊದಲಿಗೆ ಜೇಡರ ಬಲೆಯ ಆಕೃತಿಯಲ್ಲಿ ಎರಡು ದೋಸೆಗಳನ್ನು ಮಾಡಿ, ಬಳಿಕ ಒಂದು ದೋಸೆಯನ್ನು ಚೀಸ್, ಎಣ್ಣೆ, ಮಸಾಲೆ ಹಾಕಿ ಬಳಿಕ ಮತ್ತೊಂದು ದೋಸೆಯನ್ನು ಅದರ ಮೇಲೆ ಇಟ್ಟು ಅಡುಗೆ ಮಾಡುವುದನ್ನು ಮುಂದುವರೆಸುತ್ತಾರೆ. ಕೊನೆಯಲ್ಲಿ ಈ ದೋಸೆಗೆ ಸ್ಮೈಲಿ ಆಕೃತಿಯಲ್ಲಿ ಟೊಮ್ಯಾಟೋ ಕೆಚಪ್ ಸವರಿ ಅದನ್ನು ಗ್ರಾಹಕರಿಗೆ ಉಣಬಡಿಸುತ್ತಾರೆ.
’ನಮಸ್ತೇ ಇಂಡಿಯಾ’ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ರೀಲ್ಸ್ ಶೇರ್ ಮಾಡಲಾಗಿದ್ದು, ಎರಡು ತಿಂಗಳಲ್ಲಿ 16 ದಶಲಕ್ಷ ವಿಕ್ಷಣೆಗಳನ್ನು ಈ ರೀಲ್ಸ್ ಕಂಡಿದ್ದು, ಜೊತೆಯಲ್ಲಿ ಆರು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.
“ಇದು ದೋಸೆಯಂತೆ ಕಾಣುವುದಕ್ಕಿಂತ ಭಾರತೀಯ ಪೀಟ್ಝಾದಂತೆ ಭಾಸವಾಗುತ್ತದೆ,” ಎಂದು ನೆಟ್ಟಿಗರೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
https://www.youtube.com/watch?v=fml-hCRW4Ck&feature=youtu.be