alex Certify ಹಾರುವ ಬೈಕ್​ ತಯಾರಿಸಿದ ಜಪಾನ್​ ಕಂಪೆನಿ | Viral Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರುವ ಬೈಕ್​ ತಯಾರಿಸಿದ ಜಪಾನ್​ ಕಂಪೆನಿ | Viral Video

ಜಪನೀಸ್ ಸ್ಟಾರ್ಟ್-ಅಪ್ AERWINS ಟೆಕ್ನಾಲಜೀಸ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ Xturismo ಎಂಬ ಹಾರುವ ಬೈಕ್ ಅನ್ನು ತಯಾರಿಸಿದೆ. ಪ್ರಪಂಚದ ಮೊದಲ ಹಾರುವ ಬೈಕು ಎಂದು ಹೆಸರಿಸಲ್ಪಟ್ಟ Xturismo ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋವನ್ನು ಡೆಟ್ರಾಯಿಟ್ ಆಟೋ ಶೋನ ಸಹ-ಅಧ್ಯಕ್ಷ ಥಾಡ್ ಸ್ಜೋಟ್ ಶೇರ್​ ಮಾಡಿಕೊಂಡಿದ್ದಾರೆ. ಅವರು ಈ ಬೈಕ್ ಪರೀಕ್ಷಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಬೈಕು ಸವಾರಿಯ ಅನುಭವವು ಸುಗಮ ಮತ್ತು ಹರ್ಷದಾಯಕವಾಗಿತ್ತು ಎಂದು ಅವರು ಹೇಳಿದ್ದಾರೆ.

ನೋಡಲು ದೊಡ್ಡ ಡ್ರೋಣ್​ನಂತೆಯೇ ಈ ಬೈಕ್​ ಕಾಣಿಸುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಶೀಘ್ರದಲ್ಲಿ ಇದು ಮಾರುಕಟ್ಟೆಯಲ್ಲಿಯೂ ಲಭ್ಯವಾದರೆ ಉತ್ತಮ ಎಂದಿದ್ದಾರೆ. ರಸ್ತೆಯ ಮೇಲೆ ಟ್ರಾಫಿಕ್​ ಜಾಂ ಮಾಡಿದಂತೆ ಆಕಾಶದಲ್ಲಿಯೂ ಜಾಂ ಆಗುವ ದಿನ ದೂರವಿಲ್ಲ ಎಂದು ಇನ್ನು ಕೆಲವರು ಹೇಳಿಕೊಂಡಿದ್ದಾರೆ.

Meet the world's first flying motorcycle made by a Japanese startup: Watch  Video | Auto News | Zee News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...