HomeKarnatakaಕಂಠಪೂರ್ತಿ ಕುಡಿದು ಬಾರ್‌ ನಲ್ಲೇ ಬಿದ್ದ ಸ್ಟಾರ್ಟ್‌ಅಪ್ ಉದ್ಯೋಗಿ: ಫೋಟೋ ವೈರಲ್​

ಕಂಠಪೂರ್ತಿ ಕುಡಿದು ಬಾರ್‌ ನಲ್ಲೇ ಬಿದ್ದ ಸ್ಟಾರ್ಟ್‌ಅಪ್ ಉದ್ಯೋಗಿ: ಫೋಟೋ ವೈರಲ್​

ಬೆಂಗಳೂರಿನ ಸ್ಟಾರ್ಟ್‌ಅಪ್ ಉದ್ಯೋಗಿಯೊಬ್ಬ ಕುಡಿದು ಬಿದ್ದುಕೊಂಡಿರುವ ಚಿತ್ರಗಳನ್ನು ಯೂಟ್ಯೂಬರ್ ಕ್ಯಾಲೆಬ್ ಫ್ರೈಸೆನ್ ಟ್ವಿಟ್ಟರ್‌ನಲ್ಲಿ ಶೇರ್​ ಮಾಡಿದ್ದಾರೆ. ಉದ್ಯೋಗಿಯೊಬ್ಬ ಬಾರ್‌ನಲ್ಲಿ ಅಸ್ತವ್ಯಸ್ತವಾಗಿ ಬಿದ್ದಿರುವುದನ್ನು ಇದರಲ್ಲಿ ನೋಡಬಹುದು.

ಬೆಂಗಳೂರಿನ ಪ್ರಮುಖ ಸ್ಟಾರ್ಟ್‌ಅಪ್‌ನ ಯುವಕನೊಬ್ಬ ಇಂದು ರಾತ್ರಿ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದು ಬಿದ್ದಿದ್ದಾನೆ. ಉಸಿರುಗಟ್ಟಿಸುವ ಸ್ಥಿತಿಯಲ್ಲಿ ಆತನನ್ನು ನೋಡಿ. ಅವನ ತಂಡವು ಪಾರ್ಟಿ ಮುಗಿಸಿ ಎನ್​ಜಾಯ್ ಮಾಡಿ ಬಿಟ್ಟು ಹೋಗಿದೆ. ಈತ ಏಕಾಂಗಿಯಾಗಿ ಬಾರ್‌ನಲ್ಲಿ ಬಿದ್ದಿದ್ದಾನೆ. ಈ ರೀತಿ ಮಾಡಿಕೊಂಡು ಜೀವನ ಏಕೆ ಹಾಳು ಮಾಡಿಕೊಳ್ಳುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.

ನಂತರದ ಟ್ವೀಟ್‌ನಲ್ಲಿ, ಅವರು ಸ್ಟಾರ್ಟಪ್ ಸಂಸ್ಥಾಪಕರಿಗೂ ಸಂದೇಶವನ್ನು ಕಳುಹಿಸಿದ್ದಾರೆ. ನಿಮ್ಮ ಸಿಬ್ಬಂದಿಯನ್ನು ಸರಿಯಾಗಿ ನೋಡಿಕೊಂಡರೆ ಒಳ್ಳೆಯದು ಎಂದು ಅವರು ಹೇಳಿದ್ದು, ಇದರ ಪರ-ವಿರೋಧ ನಿಲುವು ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular