ಬೆಂಗಳೂರು: ಅಕ್ರಮ ಸಂಬಂಧ ಆರೋಪದಿಂದ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಾಕುವಿನಿಂದ ಇರಿದು ಪತಿ ಸೋಹೈಲ್ ಪತ್ನಿ ತಬ್ಸಿಮ್ ಬೀಬಿ ಅವರನ್ನು ಕೊಲೆ ಮಾಡಿದ್ದಾನೆ. 14 ವರ್ಷಗಳ ಹಿಂದೆ ತಬ್ಸಿಮ್ ಮತ್ತು ಶೇಕ್ ಸೋಹೈಲ್ ಮದುವೆಯಾಗಿತ್ತು. ಕೊಲ್ಕತ್ತಾ ಮೂಲದ ದಂಪತಿ ಇವರಾಗಿದ್ದು, ಅಕ್ರಮ ಸಂಬಂಧ ವಿಚಾರ ತಿಳಿದುಕೊಂಡು ಸೋಹೈಲ್ ಪತ್ನಿಯನ್ನು ಊರಿಗೆ ಕರೆದುಕೊಂಡು ಹೋಗಿದ್ದ.
ಆದರೆ ಅತಿ ಬಿಟ್ಟು ಪ್ರಿಯಕರನ ಜೊತೆ ತಬ್ಸಿಮ್ ಬೆಂಗಳೂರಿನಲ್ಲಿ ಇದ್ದಳು. ಆರು ವರ್ಷಗಳ ನಂತರ ಬೆಂಗಳೂರಿಗೆ ಬಂದಿದ್ದ ಪತಿ ಶೇಕ್ ಸೋಹೈಲ್ ನಿನ್ನೆ ರಾತ್ರಿ ಮಾತನಾಡಬೇಕೆಂದು ಪತ್ನಿಯನ್ನು ಭೇಟಿಯಾಗಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿದ್ದಾನೆ. ಎರಡೂವರೆ ವರ್ಷದ ಮಗುವನ್ನು ಕೂಡ ಗಾಯಗೊಳಿಸಿದ್ದಾನೆ. ಆರೋಪಿ ಸೋಹೈಲ್ ನನ್ನು ಹೆಣ್ಣೂರು ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.