ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಸರತ್ತು ನಡೆಸಿದ್ದರೆ. ಈಗಾಗಲೇ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೂಡ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ. ಇದರ ಬೆನ್ನಲ್ಲೇ ಇಂದು ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, 80 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡಿಗಡೆ ಮಾಡಿದ್ದಾರೆ. ನಟ ಟೆನ್ನಿಸ್ ಕೃಷ್ಣ, ಬ್ರಿಜೇಷ್ ಕಾಳಪ್ಪ ಕೂಡ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ನಿಂದ ಹೊರ ಬಂದು ಎಎಪಿ ಸೇರಿರುವ ಬ್ರಿಜೇಶ್ ಕಾಳಪ್ಪ ಚಿಕ್ಕಪೇಟೆ ಕ್ಷೇತ್ರದಿಂದ ಕಣಕ್ಕಿಳಿದಿದ್ದರೆ, ನಟ ಟೆನ್ನಿಸ್ ಕೃಷ್ಣ ತುರುವೆಕೆರೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ತೇರದಾಳ-ಅರ್ಜುನ ಹಲಗಿಗೌಡ, ಬಾದಾಮಿ-ಶಿವರಾಯಪ್ಪ ಜೋಗಿನ, ಬಾಗಲಖೊಟೆ -ರಮೇಶ್ ಬದ್ನೂರ್, ಅಥಣಿ- ಸಂಪತ್ ಕುಮಾರ್ ಶೆಟ್ಟಿ, ಬೈಲಹೊಂಗಲ- ಬಿ.ಎಂ.ಚಿಕ್ಕನಗೌಡರ, ರಾಮದುರ್ಗ-ಮಲ್ಲಿಕಾರ್ಜುನ ನದಾಫ್, ಹುಬ್ಬಳ್ಳಿ-ಧಾರವಾಡ ಪೂರ್ವ- ಬಸವರಾಜ್ ಎಸ್ ತೇರದಾಳ, ಹುಬ್ಬಳ್ಳಿ ಧಾರವಾಡ ಕೇಂದ್ರ- ವಿಕಾಸ ಸೊಪ್ಪಿನ, ಕಲಘಟಗಿ-ಮಂಜುನಾಥ ಜಕ್ಕಣ್ಣವರ, ರೋಣ-ಆನೇಕಲ್ ದೊಡ್ದಯ್ಯ, ರಾಣೆಬೆನ್ನೂರ್-ಹನುಮಂತಪ್ಪ ಕಬ್ಬಾರ, ರಾಯಚೂರು-ಡಾ.ಸುಭಾಷಚಂದ್ರ ಸಂಭಾಜಿ, ಮಾನ್ವಿ- ರಾಜಾ ಶಾಮಸುಂದರ ನಾಯಕ, ದಾವಣಗೆರೆ ಉತ್ತರ – ಶ್ರೀಧರ ಪಾಟೀಲ, ಗುಬ್ಬಿ- ಪ್ರಭುಸ್ವಾಮಿ, ಶೃಂಗೇರಿ- ರಾಜನ್ ಗೌಡ, ಹಾಸನ-ಅಗಿಲೆ ಯೋಗೇಶ್, ಸಾಗರ-ಕೆ.ದಿವಾಕರ್, ಮಂಗಳೂರು ದಕ್ಷಿಣ- ಸಂತೋಷ್ ಕಮತ್, ಸುಳ್ಯ-ಸುಮನಾ, ಶಿರಸಿ-ಹಿತೇಂದ್ರ ನಾಯ್ಕ್, ಮಂಡ್ಯ-ಬೊಮ್ಮಯ್ಯ, ಪದ್ಮನಾಭನಗರ-ಅಜಯ್ ಗೌಡ, ಕಾರ್ಕಳ-ಡ್ಯಾನಿಯಲ್, ಮೂಡಬಿದರೆ-ವಿಜಯನಾಥ ವಿಠಲ ಶೆಟ್ಟಿ, ಶಿವಮೊಗ್ಗ-ನೇತ್ರಾವತಿ ಟಿ, ಭದ್ರಾವತಿ-ಆನಂದ್ ಸೇರಿದಂತೆ ಒಟ್ಟು 80 ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಆಪ್ ಘೋಷಿಸಿದೆ.