![](https://kannadadunia.com/wp-content/uploads/2023/03/೯೯೮೬೬೬.png)
ಭಾರತೀಯ ಮಹಿಳೆಯರನ್ನು ‘ಸೋಮಾರಿ’ ಎಂದಿದ್ದ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ನಟಿ ಸೋನಾಲಿ ಕುಲಕರ್ಣಿ ಅವರನ್ನು ಗಾಯಕಿ ಸೋನಾ ಮೊಹಾಪಾತ್ರ ಶ್ಲಾಘಿಸಿದ್ದಾರೆ.
ಟ್ವಿಟರ್‌ನಲ್ಲಿ ಸೋನಾ ಮೊಹಾಪಾತ್ರ ಅವರು ಸೋನಾಲಿ ಅವರ ಕ್ಷಮೆಯಾಚನೆಯ ಕುರಿತು ಲೇಖನವನ್ನು ಮರು ಹಂಚಿಕೊಂಡಿದ್ದಾರೆ.
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಸೋನಾಲಿ ಕುಲಕರ್ಣಿ, “ಭಾರತದಲ್ಲಿ ಬಹಳಷ್ಟು ಮಹಿಳೆಯರು ಸೋಮಾರಿಗಳಾಗಿರುತ್ತಾರೆ. ಅವರಿಗೆ ಉತ್ತಮ ಉದ್ಯೋಗವನ್ನು ಹೊಂದಿರುವ, ಸ್ವಂತ ಮನೆ ಇರುವ ಮತ್ತು ನಿಯಮಿತ ಇನ್‌ಕ್ರಿಮೆಂಟ್ ಪಡೆಯುವ ಬಾಯ್‌ಫ್ರೆಂಡ್ ಅಥವಾ ಪತಿ ಬೇಕು. ಆದರೆ, ಇದರ ಮಧ್ಯೆ ಮಹಿಳೆಯರು ಅವರಿಗಾಗಿ ನಿಲ್ಲುವುದನ್ನು ಮರೆತುಬಿಡುತ್ತಾರೆ. ಮಹಿಳೆಯರಿಗೆ ತಾವು ಏನು ಮಾಡುತ್ತಿದ್ದೇವೆಂಬುದು ತಿಳಿದಿಲ್ಲ” ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸೋನಾ ಮಹಾಪಾತ್ರ ಮಹಿಳೆಯರು ಮನೆಕೆಲಸದ ಜೊತೆಗೆ ಉದ್ಯೋಗ, ಅತ್ತೆ – ಮಾವನ ಆರೈಕೆ ಸೇರಿದಂತೆ ಹಲವು ಕಾರ್ಯಗಳನ್ನು ಒಟ್ಟಿಗೆ ಮಾಡುವ ಮಹಿಳೆಯರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆನಂತರ ಸೋನಾಲಿ ಕುಲಕರ್ಣಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.