HomeKarnatakaBIG NEWS: ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ; ಆದಿಚುಂಚನಗಿರಿ ಶ್ರೀ ಭೇಟಿಯಾಗುವವರೆಗೆ ಈ ಬಗ್ಗೆ ಮಾತನಾಡಲ್ಲ...

BIG NEWS: ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ; ಆದಿಚುಂಚನಗಿರಿ ಶ್ರೀ ಭೇಟಿಯಾಗುವವರೆಗೆ ಈ ಬಗ್ಗೆ ಮಾತನಾಡಲ್ಲ ಎಂದ ಸಚಿವ ಮುನಿರತ್ನ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣ ವಿಚಾರ ನಿರ್ಮಾಲಾನಂದನಾಥ ಶೀಗಳ ಅಂಗಳಕ್ಕೆ ತಲುಪಿದ್ದು, ಶ್ರೀಗಳ ಭೇಟಿ ಬಳಿಕ ಎಲ್ಲವನ್ನೂ ಮಾತನಾಡುವುದಾಗಿ ಸಚಿವ ಮುನಿರತ್ನ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೋಟಗಾರಿಕಾ ಸಚಿವ ಮುನಿರತ್ನ, ನಾನೊಬ್ಬ ನಿರ್ಮಾಪಕನಾಗಿ ಉರಿಗೌಡ, ನಂಜೇಗೌಡ ಅವರ ಸಿನಿಮಾ ಮಾಡೋಣ ಅಂತಿದೀನಿ. ಈ ಬಗ್ಗೆ ಚರ್ಚಿಸಲು ನಾಳೆ ನಿರ್ಮಲಾನಂದನಾಥ ಸ್ವಾಮೀಜಿ ಕರೆದಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಳೆ ಬೆಳಿಗ್ಗೆ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡುತ್ತೇನೆ. ಇತಿಹಾಸದ ಬಗ್ಗೆ ಮಾತನಾಡುವವರು ಜಾತಿ ಬಣ್ಣ ಕೊಡಬಾರದು. ಉರಿಗೌಡ, ದೊಡ್ಡ ನಂಜೇಗೌಡ ಕುರಿತ ಸಿನಿಮಾ ವಿಚಾರ ಈಗ ಚರ್ಚೆಯಲ್ಲಿದೆ. ಆದಿಚುಂಚನಗಿರಿ ಶ್ರೀ ಭೇಟಿಯಾಗುವವರೆಗೆ ಚಿತ್ರದ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular