
ಆರ್‌ಆರ್‌ಆರ್‌ನ ಹಿಟ್ ಟ್ರ್ಯಾಕ್ “ನಾಟು ನಾಟು” ಆಸ್ಕರ್ ಗೆದ್ದ ಸಂಭ್ರಮದ ಬೆನ್ನಲ್ಲೇ ವಿಶ್ವಾದ್ಯಂತ ಇದರ ಕ್ರೇಜ್ ಶುರುವಾಗಿದೆ. ಪ್ರಪಂಚದಾದ್ಯಂತದ ಅಭಿಮಾನಿಗಳು ನೃತ್ಯ ವೀಡಿಯೊಗಳನ್ನು ಮಾಡುತ್ತಿದ್ದಾರೆ.
ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಜಪಾನಿನ ಜೋಡಿಯಾದ ಕಾಕೆಟಕು ಮತ್ತು ಮೇಯೊ, ನಾಟು ನಾಟು ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಕಾಕೇಟಕು ಅವರು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿದ್ದಕ್ಕಾಗಿ “ನಾಟು ನಾಟು” ಅನ್ನು ಅಭಿನಂದಿಸುವ ಸಂದೇಶದ ಜೊತೆಗೆ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ವೀಡಿಯೊದಲ್ಲಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರು ‘ನಾಟು ನಾಟು’ ಚಿತ್ರದಲ್ಲಿ ಮಾಡಿದಂತೆ ಡ್ರೆಸ್ಸಿಂಗ್ ಮಾಡಿಕೊಂಡಿರುವ ಜೋಡಿ ಅದೇ ರೀತಿಯ ಮೂವ್‌ಗಳನ್ನು ಅದೇ ಉತ್ಸಾಹದಿಂದ ಮಾಡಿದ್ದಾರೆ.
ವೀಡಿಯೊ ನೆಟ್ಟಿಗರನ್ನು ಆಕರ್ಷಿಸಿದೆ. 125 ಸಾವಿರ ವೀಕ್ಷಣೆಗಳು ಮತ್ತು 18 ಸಾವಿರಕ್ಕೂ ಹೆಚ್ಚು ಇಷ್ಟಗಳನ್ನು ಗಳಿಸಿದೆ.