ತಾಂಜ಼ಾನಿಯಾದಲ್ಲಿ ಅನಾಮಿಕ ಕಾಯಿಲೆಯೊಂದು ಐದು ಜೀವಗಳನ್ನು ಬಲಿ ಪಡೆದಿದೆ. ಈ ಸೋಂಕು ಹಬ್ಬಬಲ್ಲ ಸೋಂಕಾಗಿದ್ದು ಎಲ್ಲೆಡೆ ಆತಂಕ ಮೂಡಿಸಿದ್ದು, ಪೂರ್ವ ಆಫ್ರಿಕಾದಲ್ಲಿ ಆರೋಗ್ಯದ ಕುರಿತು ಭಾರೀ ಆತಂಕ ಮೂಡಿಸಿದೆ.
ಪ್ರಕರಣವನ್ನು ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ರೋಗಲಕ್ಷಣಗಳು ಇನ್ನೂ ಏಳು ಜನರಲ್ಲಿ ಕಾಣಿಸಿಕೊಂಡಿವೆ. ತಾಂಜ಼ಾನಿಯಾದ ವಾಯುವ್ಯ ಪ್ರದೇಶದಲ್ಲಿರುವ ಸೋಂಕು ಪೀಡಿತ ಕಾಗೆರಾ ಪ್ರದೇಶಕ್ಕೆ ತಜ್ಞರನ್ನು ಕಳುಹಿಸಲಾಗಿದೆ.
ಜ್ವರ, ವಾಂತಿ, ರಕ್ತ ಸ್ರಾವ ಹಾಗೂ ಕಿಡ್ನಿ ವೈಫಲ್ಯಗಳು ಈ ಸೋಂಕಿನ ರೋಗಲಕ್ಷಣಗಳಾಗಿವೆ. ಸೋಂಕಿತರು ಹಾಗೂ ಮೃತಪಟ್ಟವರ ದೇಹಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಲಾಗುತ್ತಿದೆ.
ಉಗಾಂಡಾದಲ್ಲಿ ನಾಲ್ಕು ತಿಂಗಳ ಮಟ್ಟಿಗೆ ಅಟ್ಟಹಾಸ ಮೆರೆದು 55 ಮಂದಿಯನ್ನು ಬಲಿ ಪಡೆದ ಎಬೋಲಾ ಬಳಿಕ ಈ ನಿಗೂಢ ಸೋಂಕು ಪತ್ತೆಯಾಗಿದೆ.