ಸಮಾಜದ ಸಿದ್ಧ ಸೂತ್ರಗಳನ್ನು ಮುರಿದು ನಿಲ್ಲುವ ಮಂದಿ ದಿನಾ ಒಂದಿಲ್ಲೊಂದು ಭಿನ್ನವಾದ ಕೆಲಸ ಮಾಡುತ್ತಲೇ ಇರುತ್ತಾರೆ. ಇಂಥದ್ದೇ ಒಬ್ಬ ವ್ಯಕ್ತಿ ಶಿವಮ್ ಭಾರದ್ವಾಜ್.
ಫ್ಯಾಶನ್ ಬ್ಲಾಗರ್ ಆಗಿ ಖ್ಯಾತಿ ಮಾಡಿರುವ ಶಿವಮ್ ತಮ್ಮ ಮೇಕಪ್ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ. ಮೊದಮೊದಲು ಹೆಣ್ಣು ಮಕ್ಕಳ ಬಟ್ಟೆಗಳತ್ತ ಒಲವು ತೋರುತ್ತಿದ್ದ ಶಿವಮ್‌ರನ್ನು ಮನೆಯಿಂದ ಆಚೆ ಹಾಕಲಾಗಿತ್ತು.
ಬಳಿಕ ಮಾಯಾನಗರಿಗೆ ಬಂದು ತಮ್ಮದೇ ಆದ ಛಾಪು ಮೂಡಿಸಲು ಭಾರೀ ಶ್ರಮ ಹಾಕಿದ ಬಳಿಕ ಶಿವಮ್ ಇಂದು ಭಾರೀ ಆತ್ಮವಿಶ್ವಾಸದಲ್ಲಿ ತಮ್ಮ ಮೆಚ್ಚಿನ ಬಟ್ಟೆಗಳನ್ನು ಧರಿಸಿಕೊಂಡು ಗಂಡಸರು/ಹೆಂಗಸರ ಬಟ್ಟೆಗಳು ಎಂಬ ಸಿದ್ಧ ಸೂತ್ರಗಳನ್ನು ಮುರಿಯಲು ಹೊರಟಿದ್ದಾರೆ.
ಮುಂಬೈ ಲೋಕಲ್ ರೈಲುಗಳು ಹಾಗೂ ಮೆಟ್ರೋದಲ್ಲಿ ಸ್ಕರ್ಟ್ ಹಾಗೂ ಸನ್‌ಗ್ಲಾಸ್ ಹಾಕಿಕೊಂಡು ಕ್ಯಾಟ್‌ವಾಕ್ ಮಾಡುತ್ತಿರುವ ಶಿವಮ್, ಪ್ರಯಾಣಿಕರ ಗಮನ ಸೆಳೆದಿದ್ದಾರೆ. ಅನೇಕರು ಶಿವಮ್‌ರನ್ನು ಈ ಗೆಟಪ್‌ನಲ್ಲಿ ಕಂಡು ಮೊಬೈಲ್‌ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
’ದಿ ಗೈ ಎನ್ ಎ ಸ್ಕರ್ಟ್’ ಎಂದು ಅಡ್ಡನಾಮ ಹೊಂದಿರುವ ಶಿವಮ್‌ರ ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆಗಳು ಬಂದಿವೆ.
https://youtu.be/ntbGlGQTUPg