alex Certify UPI ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

UPI ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ….!

ಇಂದಿನ ಇಂಟರ್ನೆಟ್ ಯುಗದಲ್ಲಿ ಬಹುತೇಕ ಎಲ್ಲವೂ ಆನ್ಲೈನ್ ಆಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸಹ ಮಹತ್ತರ ಬದಲಾವಣೆಯಾಗಿದ್ದು, ಗ್ರಾಹಕರು ತಮ್ಮ ಮೊಬೈಲ್ ಮೂಲಕವೇ ಹಣ ವರ್ಗಾವಣೆ, ಸ್ವೀಕಾರ ಸೇರಿದಂತೆ ಎಲ್ಲ ಕಾರ್ಯಗಳನ್ನು ಮಾಡಬಹುದಾಗಿದೆ.

ಆದರೆ ಇದು ವಂಚಕರಿಗೂ ವರದಾನವಾಗಿದ್ದು, ಹಲವಾರು ವಿಧಾನಗಳ ಮೂಲಕ ಹಣ ಲಪಟಾಯಿಸುತ್ತಿದ್ದಾರೆ. ಹೀಗಾಗಿ ಯುಪಿಐ ಬಳಕೆ ಕುರಿತಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಕೆಲವೊಂದು ಮಹತ್ವದ ಸಲಹೆಗಳನ್ನು ನೀಡಿದೆ.

ಹಣ ಪಡೆಯಲು ಎಂದಿಗೂ ಯುಪಿಐ ಪಿನ್ ಎಂಟರ್ ಮಾಡಬೇಡಿ ಎಂದು ಸೂಚಿಸಲಾಗಿದ್ದು, ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸಲು ಮಾತ್ರ ಯುಪಿಐ ಪಿನ್ ನಮೂದಿಸಿ ಎಂದು ತಿಳಿಸಲಾಗಿದೆ.

ಯುಪಿಐ ಐಡಿಯನ್ನು ದೃಢೀಕರಿಸಲು ಸ್ವೀಕರಿಸುವವರ ಹೆಸರನ್ನು ಪರೀಕ್ಷಿಸಲು ಮರೆಯದಿರಿ ಹಾಗೂ ಪರಿಶೀಲನೆ ಇಲ್ಲದೆ ಪಾವತಿ ಮಾಡಬೇಡಿ.

ಅಪ್ಲಿಕೇಶನ್ ನ ಯುಪಿಐ ಪಿನ್ ಪುಟದಲ್ಲಿ ಮಾತ್ರ ಯುಪಿಐ ಪಿನ್ ಬಳಸಿ. ಯುಪಿಐ ಪಿನ್ ಅನ್ನು ಬೇರೆಲ್ಲಿಯೂ ಹಂಚಿಕೊಳ್ಳಬೇಡಿ.

ಹಣವನ್ನು ನೀಡಲು ಮಾತ್ರ QR ಅನ್ನು ಸ್ಕ್ಯಾನ್ ಮಾಡಿ ಹಣವನ್ನು ಸ್ವೀಕರಿಸಲು ಅಲ್ಲ.

ಯಾವುದೇ ಅಪರಿಚಿತ ವ್ಯಕ್ತಿ ಕೇಳಿದಾಗ ಮತ್ತು ಅದರ ಉಪಯುಕ್ತತೆಯನ್ನು ಅರ್ಥಮಾಡಿಕೊಳ್ಳದೆ ಯಾವುದೇ ಸ್ಕ್ರೀನ್ ಹಂಚಿಕೆ ಅಥವಾ ಎಸ್ಎಂಎಸ್ ಫಾರ್ವರ್ಡ್ ಮಾಡುವ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...