alex Certify ಸಿದ್ದರಾಮಯ್ಯ ಕೋಲಾರದಿಂದ ಹಿಂದೆ ಸರಿಯಲು ಕಾರಣವಾಯ್ತಾ ಈ ಎಲ್ಲ ಅಂಶ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದರಾಮಯ್ಯ ಕೋಲಾರದಿಂದ ಹಿಂದೆ ಸರಿಯಲು ಕಾರಣವಾಯ್ತಾ ಈ ಎಲ್ಲ ಅಂಶ ?

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿಕೊಂಡು ಬರುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಈಗ ದಿಢೀರ್ ತಮ್ಮ ತೀರ್ಮಾನವನ್ನು ಬದಲಿಸಿದ್ದಾರೆ ಎನ್ನಲಾಗಿದೆ. ಸುರಕ್ಷಿತ ಕ್ಷೇತ್ರವೆನಿಸಿರುವ ವರುಣಾದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿದ್ದರಾಮಯ್ಯನವರ ಈ ನಿರ್ಧಾರಕ್ಕೆ ಹೈಕಮಾಂಡ್ ಒತ್ತಡವೂ ಕಾರಣವೆಂದು ಹೇಳಲಾಗುತ್ತಿದ್ದು, ಅವರನ್ನು ಮಣಿಸಲೇಬೇಕೆಂಬ ಕಾರಣಕ್ಕೆ ಜೆಡಿಎಸ್ ಜೊತೆ ಬಿಜೆಪಿ ಕೈಜೋಡಿಸಬಹುದೆಂಬ ಆತಂಕ ಕೂಡ ಹೈಕಮಾಂಡ್ ನಾಯಕರನ್ನು ಕಾಡುತ್ತಿತ್ತು. ಅಲ್ಲದೆ ಈ ಚುನಾವಣೆಯಲ್ಲಿ ಒಕ್ಕಲಿಗರು ಸಿದ್ದರಾಮಯ್ಯ ವಿರುದ್ಧ ಒಟ್ಟಾಗಬಹುದು ಎಂದು ಹೇಳಲಾಗುತ್ತಿತ್ತು.

ಅಲ್ಲದೆ 2013 ರಲ್ಲಿ ಕೊರಟಗೆರೆಯಿಂದ ಜಿ. ಪರಮೇಶ್ವರ್ ಸೋಲಲು ಹಾಗೂ 2019 ರ ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ಸೋಲಲು ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರೇ ಕಾರಣ ಎಂಬ ಕಾರಣಕ್ಕೆ ದಲಿತರು ಬೆಂಬಲಿಸದಿರಬಹುದು ಎಂಬ ಭಯ ಕೂಡ ಇತ್ತು.

ಒಂದೊಮ್ಮೆ ಕೋಲಾರದಲ್ಲಿ ಪ್ರಬಲ ಸ್ಪರ್ಧೆ ಎದುರಾದರೆ ಸಿದ್ದರಾಮಯ್ಯ ಅಲ್ಲಿಯೇ ತಮ್ಮ ಗಮನ ಹರಿಸಬೇಕಾಗುತ್ತದೆ. ಹೀಗಾಗಿ ಇದು ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಅಂತಿಮವಾಗಿ ಸುರಕ್ಷಿತ ಕ್ಷೇತ್ರವೆನಿಸಿರುವ ವರುಣಾದಿಂದ ಕಣಕ್ಕಿಳಿಯಲು ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...