ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಜೀವನದ ಗುರಿ ಎಂದ ಗ್ಯಾಂಗ್ ಸ್ಟರ್

ಪಂಜಾಬಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ನನ್ನ ಕೊಲ್ಲುವುದೇ ಆತನ ಜೀವನದ ಗುರಿಯಾಗಿದೆಯಂತೆ.

ಎಬಿಪಿ ನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಕೊಲ್ಲುವುದು ನನ್ನ ಜೀವನದ ಮುಖ್ಯ ಗುರಿಯಾಗಿದೆ ಎಂದು ಹೇಳಿದ್ದಾನೆ.

ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ಬಿಷ್ಣೋಯ್ ಸಮುದಾಯಕ್ಕೆ ಅವಮಾನಿಸಿದ ನಟ ಸಲ್ಮಾನ್ ಖಾನ್ ಒಮ್ಮೆ ಕ್ಷಮೆಯಾಚಿಸಿದ ನಂತರ ಪರಿಸ್ಥಿತಿಯನ್ನು ಪರಿಹರಿಸಲಾಗುವುದು ಎಂದು ಗ್ಯಾಂಗ್ ಸ್ಟರ್ ಹೇಳಿದ್ದಾನೆ.

ಸಲ್ಮಾನ್ ಖಾನ್ ಬಿಕಾನೇರ್‌ನಲ್ಲಿರುವ ನಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಕ್ಷಮೆಯಾಚಿಸಬೇಕು. ಸಲ್ಮಾನ್ ಕ್ಷಮೆ ಯಾಚಿಸಿದರೆ ಈ ವಿಷಯ ಒಮ್ಮೆಲೇ ಮುಗಿಯುತ್ತದೆ. ಸಲ್ಮಾನ್ ಖಾನ್ ಗಾಯಕ ಸಿಧು ಮೂಸೆವಾಲಾ ಅವರಂತೆ ದುರಹಂಕಾರಿ. ಅವರ ಅಹಂ ರಾವಣನಿಗಿಂತ ದೊಡ್ಡದು ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾನೆ.

ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಂದಿದ್ದಾರೆ ಎಂದು ಬಹಿರಂಗವಾದ ನಂತರ ಸಲ್ಲು ಮೇಲೆ ಲಾರೆನ್ಸ್ ದ್ವೇಷ ಬೆಳೆಯತೊಡಗಿತು.

ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ, ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಚರನನ್ನು 2018 ರಲ್ಲಿ ಬಂಧಿಸಲಾಯಿತು.

1998 ರಲ್ಲಿ ʼಹಮ್ ಸಾಥ್ ಸಾಥ್ ಹೈʼ ಚಿತ್ರದ ಚಿತ್ರೀಕರಣ ವೇಳೆ ಸಲ್ಮಾನ್ ಖಾನ್ ಮೇಲೆ ಕೃಷ್ಣಮೃಗವನ್ನು ಕೊಂದ ಆರೋಪವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read