ದೇಶದ ಟೆಕ್ ರಾಜಧಾನಿಯೆಂದು ಕರೆಯಲ್ಪಟ್ಟಿರುವ ಬೆಂಗಳೂರಿನಲ್ಲಿ ಮೂಲೆ ಮೂಲೆಗಳಲ್ಲಿ ಉದ್ಯಮಿಗಳನ್ನು ಕಾಣಬಹುದು.
ಆದರೆ ಅವರು ಯಾವಾಗಲೂ ಎತ್ತರದ ಕಟ್ಟಡಗಳ ಐಷಾರಾಮಿ ಕಚೇರಿಗಳಲ್ಲಿ ಕಂಡುಬರುವುದಿಲ್ಲ. ಬೀದಿ ಮೂಲೆಗಳಲ್ಲಿಯೂ ತಮ್ಮದೇ ಉದ್ಯಮ ಸ್ಥಾಪಿಸಿ ಪ್ರಸಿದ್ಧರಾಗುತ್ತಿರುವವರೂ ಇದ್ದಾರೆ. ಚಾಯ್ವಾಲಾದಿಂದ ಹಿಡಿದು ಆಟೋವಾಲಾವರೆಗೆ, ನಗರವು ಎಲ್ಲರಿಗೂ ಕನಸು ಕಾಣಲು ಅನುವು ಮಾಡಿಕೊಡುತ್ತದೆ.
ಅದೇ ರೀತಿ ಜನಾರ್ದನ್ ಎಂಬ ಆಟೋ ಚಾಲಕನ ಕಥೆ ಕೂಡ. ಸುಶಾಂತ್ ಕೋಶಿ ಅವರು ಟ್ವಿಟರ್ನಲ್ಲಿ ಇವರ ಕಥೆಯನ್ನು ಹಂಚಿಕೊಂಡಿದ್ದಾರೆ. ವೈರಲ್ ಪೋಸ್ಟ್ನಲ್ಲಿ ಜನಾರ್ದನ್ ಅವರ ಆಟೋ ಚಿತ್ರ ನೋಡಬಹುದು.
ಆಟೋದ ಹಿಂದುಗಡೆ “ದಯವಿಟ್ಟು ನನ್ನ ಯೂಟ್ಯೂಬ್ ಚಾನೆಲ್ಗೆ ಚಂದಾದಾರರಾಗಿ, ಗೋಲ್ಡ್ ಜನಾರ್ದನ್ ಹೂಡಿಕೆದಾರ. ದಯವಿಟ್ಟು ಚಂದಾದಾರರಾಗಿ ಮತ್ತು ಬೆಂಬಲಿಸಿ ಎಂದು ಬರೆಯಲಾಗಿದೆ.
ಹಲವಾರು ವಿಷಯಗಳ ಮೇಲೆ ಕೇಂದ್ರೀಕರಿಸುವ ಯೂಟ್ಯೂಬ್ ಚಾನೆಲ್ಗಳನ್ನು ಹೊಂದಿರುವ ಅನೇಕ ಜನರಿದ್ದಾರೆ. ಆದರೂ ಆಟೋ ಚಾಲಕನ ಈ ಪರಿ ಜನರನ್ನು ವಿಸ್ಮಯಗೊಳಿಸಿದೆ.
ಇವರು ಬೆಳಗ್ಗೆ ಆಟೋ ಚಾಲಕರಾಗಿದ್ದು, ಸಂಜೆ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡುವುದು ಹೆಚ್ಚಿನ ಜನರಿಗೆ ಸ್ಫೂರ್ತಿ ತುಂಬುವ ಕೆಲಸವಾಗಿದೆ. ಇದನ್ನು ನೋಡಿ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
My Uber auto driver today is a YouTube influencer, specialising in personal finance. @peakbengaluru https://t.co/FZJWWzMFhB pic.twitter.com/crM8Im9JOK
— Sushant Koshy (@sushantkoshy) March 3, 2023
— Sushant Koshy (@sushantkoshy) March 4, 2023