10 ರೂಪಾಯಿಗೆ ಏನಮ್ಮಾ ಬರತ್ತೆ ಅಂತ ರಾಗ ಎಳೆಯೋ ಮಕ್ಕಳೇ ಈಗ ಹೆಚ್ಚು. ಇತ್ತೀಚೆಗೆ ಜಂಕ್ ಫುಡ್ ಗಳ ರುಚಿಗೆ ಮಕ್ಕಳು ಮರುಳಾಗುತ್ತಿದ್ದಾರೆ. ಸರಿಯಾದ ವಯಸ್ಸಿನಲ್ಲಿ ಮಕ್ಕಳಿಗೆ ಹಣದ ಉಳಿತಾಯದ ಪಾಠ ತಿಳಿಸಿಕೊಡುವುದು ಸೂಕ್ತ.
10 ವರ್ಷಕ್ಕೆ ಕಾಲಿಟ್ಟ ಮಕ್ಕಳಿಗೆ ಪಿಗ್ಗಿ ಬ್ಯಾಂಕ್ ಅನ್ನು ಉಡುಗೊರೆಯಾಗಿ ಕೊಟ್ಟು, ಹಣದ ಉಳಿತಾಯದ ಪ್ರಯೋಜನ ಹಾಗೂ ಅವಶ್ಯಕತೆ ತಿಳಿಸುವುದು ಒಳಿತು.
ಇದು ಮಕ್ಕಳಿಗೆ ಹಣದ ಮಹತ್ವ ಹಾಗೂ ಜವಾಬ್ದಾರಿಯನ್ನು ಕಲಿಸುತ್ತದೆ. ಪಿಗ್ಗಿ ಬ್ಯಾಂಕ್ ತುಂಬಿದ ನಂತರ ಮಕ್ಕಳ ಅವಶ್ಯಕತೆ ಹಾಗೂ ಆಸಕ್ತಿಗೆ ಆದ್ಯತೆ ಕೊಟ್ಟು ಅವರಿಂದಲೇ ಅವರಿಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಲು ಪೋಷಕರು ಬೆಂಬಲಿಸಬೇಕು.
ಇದರಿಂದ ಮಕ್ಕಳಿಗೆ ದುಂದು ವೆಚ್ಚ ಮಾಡದೆ, ಹಣ ಗಳಿಕೆಯ ಸೂಕ್ತ ಅಭ್ಯಾಸ ಬೆಳೆಸಿದಂತೆ ಆಗುತ್ತದೆ. ಇದೇ ಅಭ್ಯಾಸ ಮುಂದುವರೆದು ಮಕ್ಕಳಿಗೆ ಹಣದ ನಿರ್ವಹಣೆಯ ಬಗ್ಗೆ ಮನೆಯಿಂದಲೇ ಸೂಕ್ತ ತರಬೇತಿ ಸಿಕ್ಕಂತೆ ಆಗುತ್ತದೆ.