ವಾಯುಸೇನೆ ಸೇರ ಬಯಸುವ ಯುವಕರು, ಯುವತಿಯರಿಗೆ ಗುಡ್ ನ್ಯೂಸ್: IAF ಅಗ್ನಿವೀರ್ ನೇಮಕಾತಿಗೆ ಅರ್ಜಿ

ಭಾರತೀಯ ವಾಯುಪಡೆ ಅಗ್ನಿಪಥ ಯೋಜನೆಯಡಿ ಅಗ್ನಿವೀರ್ ವಾಯು ಆಗಿ IAF ಗೆ ಸೇರಲು ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಭಾರತೀಯ ವಾಯುಪಡೆಯ(IAF) ಅಗ್ನಿವೀರ್ ವಾಯು ನೇಮಕಾತಿ 2023 ರ ನೋಂದಣಿಗಾಗಿ ನೋಂದಣಿ ಪ್ರಕ್ರಿಯೆಯು ಇಂದಿನಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 31 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಧಿಕೃತ ವೆಬ್‌ಸೈಟ್ www.agnipathvayu.cdac ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ನೋಂದಣಿಯು 17 ಮಾರ್ಚ್ 2023 ರಂದು 10 ಗಂಟೆಗೆ ಪ್ರಾರಂಭವಾಗಿದ್ದು, 31 ಮಾರ್ಚ್ 2023 ರಂದು ಸಂಜೆ 5 ಗಂಟೆವರೆಗೆ  ಅರ್ಜಿ ಸಲ್ಲಿಸಬಹುದು.

ಅಗ್ನಿವೀರ್ ವಾಯು ನೇಮಕಾತಿಗೆ ವಯೋಮಿತಿ ನಿಗದಿಪಡಿಸಿದ್ದು, ಆನ್‌ಲೈನ್ ಪರೀಕ್ಷೆಗೆ ನೋಂದಾಯಿಸುವಾಗ ಅಭ್ಯರ್ಥಿಯು 250 ರೂ. ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. ಅಭ್ಯರ್ಥಿಯು ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. J&K, ಅಸ್ಸಾಂ ಮತ್ತು ಮೇಘಾಲಯದ ಅಭ್ಯರ್ಥಿಗಳು ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ, ಇದರಿಂದ ವಿನಾಯಿತಿ ನೀಡಲಾಗುತ್ತದೆ.

IAF ಅಗ್ನಿವೀರ್ ವಾಯು ನೋಂದಣಿ ವಿವರಗಳಿಗೆ agnipathvayu.cdac.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read