ಇನ್ನೇನು ಬೇಸಿಗೆ ಬಂದಾಯ್ತು. ಬಿಸಿಲಿನ ಝಳಕ್ಕೆ ಬಾಡಿ ಹೋಗದವರಾರೂ ಇರಲಿಕ್ಕಿಲ್ಲ. ಶಾಪಿಂಗ್ ಗೆ ತೆರಳುವಾಗ ಅಥವಾ ದಿನನಿತ್ಯ ಉದ್ಯೋಗಕ್ಕೆ ತೆರಳುವಾಗ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಯಾವ ರೀತಿಯ ಕನ್ನಡಕಗಳನ್ನು ಬಳಸಬಹುದು ಎಂಬ ಕುರಿತು ಸಲಹೆಗಳು ಇಲ್ಲಿವೆ.
ಯುವಿ ಪ್ರೊಟೆಕ್ಷನ್ ಇರುವ ಕನ್ನಡಕವನ್ನೇ ಧರಿಸಿ. ನಿಮ್ಮ ತ್ವಚೆಯನ್ನು ಮಾತ್ರ ರಕ್ಷಿಸಿಕೊಂಡರೆ ಸಾಲದು, ಕಣ್ಣಿನ ಆರೋಗ್ಯವೂ ಬಹಳ ಮುಖ್ಯ. ಯುವಿ ಕಿರಣಗಳಿಂದ ನಿಮ್ಮನ್ನು ಕಾಪಾಡಲು ಸನ್ ಗ್ಲಾಸ್ ಗಳನ್ನು ಬಳಸಿ.
ಸೂಕ್ತ ಪರಿಸ್ಥಿತಿಗೆ ಹೊಂದಿಕೊಳ್ಳುವಂತ ಗ್ಲಾಸಸ್ ಧರಿಸಿ: ಕಚೇರಿಗೆ ತೆರಳುವಾಗ ಫ್ಯಾನ್ಸಿ ಗ್ಲಾಸ್ ಧರಿಸುವುದು ಅಪಹಾಸ್ಯವಾಗಿ ಕಂಡೀತು. ಹೀಗಾಗಿ ಸೂಕ್ತ ಸನ್ನಿವೇಶಕ್ಕೆ ಹೊಂದಿಕೆಯಾಗುವ ಕನ್ನಡಕವನ್ನೇ ಧರಿಸಿ.
ಕೆಲವು ಸಂದರ್ಭಗಳಲ್ಲಿ ಗ್ಲಾಸ್ ಹಾಕಲು ಸಾಧ್ಯವಿಲ್ಲ ಎಂದಾದಾಗ ಕಣ್ಣಿನ ತನಕ ಮುಚ್ಚುವ ಹ್ಯಾಟ್ ಧರಿಸಿ, ಅದು ಕಣ್ಣಿಗೆ ಸ್ವಲ್ಪ ಮಟ್ಟಿನ ನಿರಾಳತೆ ನೀಡುತ್ತದೆ.
ಬಿಸಿಲಿಗೆ ಕಣ್ಣಿನ ಮೇಕಪ್ ಹಾಳಾಗದಂತೆ ತಡೆಯುವ ಗ್ಲಾಸ್ ಅನ್ನು ಮರೆಯದೆ ಧರಿಸಿ, ನಿಮ್ಮ ಕಣ್ಣಿನ ಸೌಂದರ್ಯ, ಆರೋಗ್ಯವನ್ನು ಕಾಪಾಡಿಕೊಳ್ಳಿ.