ಅತಿ ಹೆಚ್ಚು ತೂಕದ ಮೂಲಂಗಿ ಅಂದ್ರೆ ಅದು ಗರಿಷ್ಠ ಎಷ್ಟು ಕೆಜಿ ಇರಬಹುದು? 10 ಕೆಜಿ ಅಥವಾ 20 ಕೆಜಿ ? ಆದ್ರೆ ನೀವು ಊಹಿಸಲೂ ಸಾಧ್ಯವಿಲ್ಲ, ಬರೋಬ್ಬರಿ 45 ಕೆಜಿ ತೂಕದ ಅತಿದೊಡ್ಡ ಮೂಲಂಗಿ ನಿಮ್ಮ ಹುಬ್ಬೇರಿಸುತ್ತಿದೆ.
ಜಪಾನಿನ ರಸಗೊಬ್ಬರ ಮತ್ತು ಕೃಷಿ ಉತ್ಪನ್ನಗಳ ತಯಾರಕರು ವಿಶ್ವದ ಅತಿದೊಡ್ಡ ಮೂಲಂಗಿಯನ್ನು ಬೆಳೆದಿದ್ದಾರೆ. ಇದು 45.865 ಕೆಜಿ ತೂಕವಿದೆ.
ಇದರ ಸುತ್ತಳತೆ 113 ಸೆಂ.ಮೀ ಆಗಿದ್ದರೆ ಅದರ ಬೇರು 80 ಸೆಂ.ಮೀ ಉದ್ದವಾಗಿದೆ.
ಮಂಡಾ ಫರ್ಮೆಂಟೇಶನ್ ಕಂಪನಿ ವಿಶ್ವದ ಅತ್ಯಂತ ಭಾರವಾದ ಮೂಲಂಗಿಯನ್ನು ಬೆಳೆಯುವ ಮೂಲಕ ಫೆಬ್ರವರಿ 22 ರಂದು ಗಿನ್ನೆಸ್ ವಿಶ್ವ ದಾಖಲೆಗಳನ್ನು ಸ್ಥಾಪಿಸಿದೆ. ಹಿರೋಷಿಮಾ ಪ್ರಾಂತ್ಯದ ಒನೊಮಿಚಿಯಲ್ಲಿರುವ ಹಕ್ಕೊ ಪಾರ್ಕ್ನಲ್ಲಿ ವಿಶ್ವ ದಾಖಲೆಯನ್ನು ಪರಿಶೀಲಿಸಲಾಯಿತು.
ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಕಂಪನಿಯು ತನ್ನ ವಿಶೇಷ ಕೃಷಿ ಪೂರಕಗಳು ಮತ್ತು ರಸಗೊಬ್ಬರಗಳನ್ನು ಬಳಸಿಕೊಂಡು ದೈತ್ಯ ಮೂಲಂಗಿಗಳನ್ನು ವಾಡಿಕೆಯಂತೆ ಬೆಳೆದಿದೆ. ಈ ದೈತ್ಯ ಮೂಲಂಗಿಯನ್ನು ಮೂರು ತಿಂಗಳ ನಿಯಮಿತ ಸಮಯದ ಚೌಕಟ್ಟಿಗೆ ವಿರುದ್ಧವಾಗಿ ಆರು ತಿಂಗಳಲ್ಲಿ ಬೆಳೆಯಲಾಗಿದೆ.
ಮಾರ್ಚ್ 10 ರಂದು, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ನಾಲ್ಕು ಜನ ಮೂಲಂಗಿಯನ್ನ ಎಳೆದುತಂದು ತೂಕ ಹಾಕುತ್ತಾರೆ. ಈ ವೀಡಿಯೊ ಅತಿಹೆಚ್ಚು ಲೈಕ್ಗಳನ್ನು ಸಂಗ್ರಹಿಸಿದೆ.