alex Certify ಪತ್ನಿ ಸಿಟ್ಟು ತಣಿಸಲು ಲಾಟರಿ ಟಿಕೇಟ್​ ಖರೀದಿಸಿದವನಿಗೆ ‌ʼಬಂಪರ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಸಿಟ್ಟು ತಣಿಸಲು ಲಾಟರಿ ಟಿಕೇಟ್​ ಖರೀದಿಸಿದವನಿಗೆ ‌ʼಬಂಪರ್ʼ

ಹೆಂಡತಿ ತನ್ನ ಮೇಲೆ ಕೋಪ ಮಾಡಿಕೊಂಡ ಕಾರಣ, ಆಕೆಯನ್ನು ಮೆಚ್ಚಿಸುವುದಕ್ಕಾಗಿ ಎರಡು ಲಾಟರಿ ಟಿಕೇಟ್​ ಅನ್ನು ಈ ಪತಿರಾಯ ಖರೀದಿ ಮಾಡಿದ್ದು, ಜಾಕ್​ಪಾಟ್​ ಹೊಡೆದಿದೆ !

ಪತ್ನಿಯ ಹೆಸರಿನಲ್ಲಿ ಖರೀದಿ ಮಾಡಿದ ಎರಡೂ ಲಾಟರಿಗೆ ಆಸ್ಟ್ರೇಲಿಯಾದ ವ್ಯಕ್ತಿಗೆ $2 ಮಿಲಿಯನ್ (ಸುಮಾರು ರೂ. 16.4 ಕೋಟಿ) ಸಿಕ್ಕಿದೆ! ಪತ್ನಿಯನ್ನು ರಮಿಸಲು ಪತಿ ಮಾಡಿದ ಈ ಸಾಹಸಕ್ಕೆ ದಂಪತಿ ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿದ್ದಾರೆ.

ನ್ಯೂ ಸೌತ್ ವೇಲ್ಸ್‌ನಲ್ಲಿ ಲಾಟರಿ ಖರೀದಿ ಮಾಡಿದ ಪತಿಗೆ ಈ ಭಾರಿ ಮೊತ್ತ ಸಿಕ್ಕಿದೆ. ಈ ದಂಪತಿ ಲಾಟರಿ ಟಿಕೆಟ್​ ಖರೀದಿ ಮಾಡುವುದು ಬಹಳ ವರ್ಷಗಳಿಂದಲೂ ನಡೆದು ಬಂದಿದೆ. ಯಾರಿಗೆ ಅದೃಷ್ಟ ಒಲಿಯುತ್ತದೆ ಎಂಬ ಬಗ್ಗೆ ದಂಪತಿ ಬೆಟ್ಟಿಂಗ್​ ಕೂಡ ನಡೆಸುತ್ತಿದ್ದರಂತೆ. ಆದರೆ ಈಗ ಪತ್ನಿಯ ಹೆಸರಿನಲ್ಲಿ ಪತಿ ಖರೀದಿಸಿದ್ದ ಲಾಟರಿಗೆ ಅದೃಷ್ಟ ಒಲಿದಿದೆ.

ಆರಂಭದಲ್ಲಿ ಈ ವಿಷಯವನ್ನು ನಂಬಲು ಸಾಧ್ಯವೇ ಆಗಲಿಲ್ಲ ಎಂದು ದಂಪತಿ ಹೇಳಿದ್ದಾರೆ. ಈಗ ಇವರು ತಮ್ಮ ಮಕ್ಕಳಿಗಾಗಿ ಮನೆ ಖರೀದಿಸುವ ಯೋಚನೆಯಲ್ಲಿ ಇದ್ದಾರೆ, ಜೊತೆಗೆ ಮೊಮ್ಮಕ್ಕಳ ಭವಿಷ್ಯಕ್ಕಾಗಿ ಹಣ ಡಿಪಾಸಿಟ್​ ಇಡುತ್ತಾರಂತೆ. ಈ ಸುದ್ದಿ ವೈರಲ್​ ಆಗುತ್ತಲೇ ಹಣವನ್ನು ಹೇಗೆಲ್ಲಾ ಉಪಯೋಗಿಸಬಹುದು ಎಂಬ ಬಗ್ಗೆ ನೆಟ್ಟಿಗರು ವಿಭಿನ್ನ ರೀತಿಯ ಸಲಹೆ ಕೊಡುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...