alex Certify ದೇಶದ 63 ಪೊಲೀಸ್ ಠಾಣೆಗಳಲ್ಲಿ ವಾಹನಗಳೇ ಇಲ್ಲ…..! ಕೇಂದ್ರ ಗೃಹ ಸಚಿವಾಲಯದಿಂದಲೇ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ 63 ಪೊಲೀಸ್ ಠಾಣೆಗಳಲ್ಲಿ ವಾಹನಗಳೇ ಇಲ್ಲ…..! ಕೇಂದ್ರ ಗೃಹ ಸಚಿವಾಲಯದಿಂದಲೇ ಮಾಹಿತಿ

ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಗುರುತರ ಜವಾಬ್ದಾರಿ ಪೊಲೀಸರಿಗಿರುತ್ತದೆ. ಹೀಗಾಗಿಯೇ ಅವರುಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕಾದ್ದು ಸರ್ಕಾರಗಳ ಕರ್ತವ್ಯವಾಗಿರುತ್ತದೆ. ಆದರೆ ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾಹಿತಿಯೊಂದು ಆಘಾತಕಾರಿಯಾಗಿದೆ.

ಹೌದು, ದೇಶದ 63 ಪೊಲೀಸ್ ಠಾಣೆಗಳಲ್ಲಿ ಯಾವುದೇ ವಾಹನ ಸೌಲಭ್ಯ ಇಲ್ಲವೆಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರದಂದು ಲೋಕಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಅಲ್ಲದೆ 628 ಪೊಲೀಸ್ ಠಾಣೆಗಳು ದೂರವಾಣಿ ಸಂಪರ್ಕವನ್ನೂ ಸಹ ಹೊಂದಿಲ್ಲವೆನ್ನಲಾಗಿದ್ದು, ಜೊತೆಗೆ 285 ಠಾಣೆಗಳಲ್ಲಿ ವಯರ್ಲೆಸ್ ಸೆಟ್ ಅಥವಾ ಮೊಬೈಲ್ ಫೋನ್ ಗಳನ್ನು ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ. ದೇಶದಲ್ಲಿ ಒಟ್ಟು 17,535 ಪೊಲೀಸ್ ಠಾಣೆಗಳಿವೆ ಎಂದೂ ಸಹ ಸಚಿವರು ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...