ನೇಪಾಳದಿಂದ ಬಂದ ಸುದ್ದಿಯೊಂದು ಭಾರತೀಯರ ನಿದ್ದೆಯನ್ನೇ ಕೆಡಿಸಿದೆ. ಬೇರೆ-ಬೇರೆ ರಾಷ್ಟ್ರಗಳಲ್ಲಿ ಅಪರಾಧ ಚಟುವಟಿಕೆಗಳಿಗಾಗಿ ಬಂಧಿಸಲ್ಪಟ್ಟ ಅಪರಾಧಿಗಳಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚು ಅನ್ನೋ ವರದಿಯನ್ನ ನೇಪಾಳ್ ಪೊಲೀಸ್ ಮುಂದಿಟ್ಟಿದೆ. 2022-23 ಈ ವರ್ಷದಲ್ಲಿ ಬಂಧಿಸಲ್ಪಟ್ಟ ವಿದೇಶಿ ಅಪರಾಧಿಗಳ ಪೈಕಿಯಲ್ಲಿ ಕನಿಷ್ಠ 20 ದೇಶಗಳಿಂದ ಬಂಧಿಸಲ್ಪಟ್ಟ ಅಪರಾಧಿಗಳಲ್ಲಿ 25% ಜನರು ಭಾರತೀಯರಾಗಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಚೀನಾ ಇದ್ದು, 22% ಚೀನಿ ಪ್ರಜೆಗಳನ್ನ ಬಂಧಿಸಿದ್ದಾರೆ.
ಇದರ ಹೊರತಾಗಿ ನೇಪಾಳ ಪೊಲೀಸರ ವರದಿ ಪ್ರಕಾರ, ಬಂಧಿಸಲ್ಪಟ್ಟ ಭಾರತೀಯ ಅಪರಾಧಿಗಳಲ್ಲಿ ಕಸ್ಟಮ್ ವಂಚನೆ ಮಾಡಿದವರ ಸಂಖ್ಯೆಯೇ ಹೆಚ್ಚಾಗಿದೆ. ಇನ್ನು ಕನಿಷ್ಠ 5% ಜನ ನಕಲಿ ಕರೆನ್ಸಿಯ ವ್ಯವಹಾರ ಆರೋಪದಡಿಯಲ್ಲಿ ಬಂಧನ ಮಾಡಲಾಗಿದೆ. ಇದೆಲ್ಲದರ ಹೊರತಾಗಿ ನಿಷಿದ್ಧ ಮಾದಕವಸ್ತುಗಳ ವ್ಯವಹಾರ, ಅಪಹರಣ, ನಕಲಿ ವಸ್ತುಗಳ ಸಾಗಾಟ ಇವುಗಳನ್ನ ಆರೋಪದ ಮೇಲೆ ಬಂಧಿಸಲಾಗಿದೆ.
ಭಾರತ ಮತ್ತು ಚೀನಾ ನಂತರ ಈ ಅಪರಾಧಿಗಳ ಪಟ್ಟಿಯಲ್ಲಿ, ಮೂರನೇ ಸ್ಥಾನದಲ್ಲಿ ಥಾಯ್ ಪ್ರಜೆಗಳಿದ್ದಾರೆ ಎಂದು ಖಂಡು ಪೋಸ್ಟ್ ವರದಿ ಮಾಡಿದೆ. 2021-22ರಲ್ಲಿ ಪೊಲೀಸರು 41 ದೇಶಗಳ ಒಟ್ಟು 108 ವಿದೇಶಿಯರನ್ನು ಬಂಧಿಸಿದ್ದು ಈ ಪೈಕಿ 31 ಭಾರತೀಯರನ್ನು ಬಂಧಿಸಿದ್ದಾರೆ, ನಂತರ 16 ಚೀನೀ ಪ್ರಜೆಗಳು ಮತ್ತು 13 ಬಾಂಗ್ಲಾದೇಶಿಯರಿದ್ದಾರೆ.
ಭಾರತೀಯರಿಗೆ ಹೋಲಿಸಿದರೆ ಚೀನಾದ ಪ್ರಜೆಗಳು ಗಂಭೀರ ಹಾಗೂ ಘೋರ ಅಪರಾಧಗಳಿಗಾಗಿ ಬಂಧಿಸಲ್ಪಟ್ಟಿದ್ದಾರೆ. ಕೊಲೆ ಹಾಗೂ ಕ್ರಿಮಿನಲ್‌ನಂತರ ಗಂಭೀರ ಅಪರಾಧಗಳಾದ, ಕಳ್ಳಸಾಗಣೆ, ಅತ್ಯಾಚಾರ, ದುರ್ವವ್ಯಹಾರ ನಂತಹ ಆರೋಪಗಳು ಇವರ ಮೇಲಿದೆ ಎಂದು ನೇಪಾಳ ಪೊಲೀಸರ ದಾಖಲೆಯಲ್ಲಿ ಹೇಳಲಾಗಿದೆ.