ಹೃದಯಸ್ಪರ್ಶಿ ವಿಡಿಯೋವೊಂದರಲ್ಲಿ ಐರ್ಲೆಂಡ್ನ ಪುಟ್ಟ ಬಾಲಕಿಯೊಬ್ಬಳು ತನ್ನ ನೆರೆಮನೆಯಲ್ಲಿದ್ದ ವಯಸ್ಸಾದ ಮಹಿಳೆಗೆ ಅಂತರಾಷ್ಟ್ರೀಯ ಮಹಿಳಾ ದಿನದಂದು ಉಡುಗೊರೆ ನೀಡಿ ಅಚ್ಚರಿಗೊಳಿಸಿದ್ದಾಳೆ.
ಇತ್ತೀಚೆಗೆ ಪತಿಯನ್ನು ಕಳೆದುಕೊಂಡಿರುವ ತನ್ನ ನೆರೆಯ ವಿವಿಯೆನ್ನಿಗಾಗಿ ಹುಡುಗಿ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದ್ದಳು.
ಪುಟ್ಟ ಹುಡುಗಿ ತನ್ನ ನೆರೆಹೊರೆಯವರೊಂದಿಗೆ ಸಂವಹನ ನಡೆಸುತ್ತಿರುವ ವೀಡಿಯೊವನ್ನು ಗುಡ್ ನ್ಯೂಸ್ ಮೂವ್ಮೆಂಟ್ ಖಾತೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ.
ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
https://youtu.be/i_uXal_gsig