HomeIndiaಆಸ್ಕರ್​ ಪಡೆದ ಭಾರತೀಯರನ್ನು ಅಭಿನಂದಿಸಿದ ರಾಹುಲ್​ ಗಾಂಧಿ, ಕೇಜ್ರಿವಾಲ್

ಆಸ್ಕರ್​ ಪಡೆದ ಭಾರತೀಯರನ್ನು ಅಭಿನಂದಿಸಿದ ರಾಹುಲ್​ ಗಾಂಧಿ, ಕೇಜ್ರಿವಾಲ್

ಭಾನುವಾರ ರಾತ್ರಿ ನಡೆದ ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಗಳಿಸಿದ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ತಂಡ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ತಯಾರಕರಿಗೆ ಹಲವರು ಶುಭ ಕೋರುತ್ತಿದ್ದಾರೆ.‌

RRR ನ ನಾಟು ನಾಟು ಹಾಡು 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಗುನೀತ್ ಮೊಂಗಾ ಅವರ ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ RRR ತಂಡವನ್ನು ಅಭಿನಂದಿಸಿ ಟ್ವೀಟ್​ ಮಾಡಿದ್ದಾರೆ. “ಆಸ್ಕರ್‌ನಲ್ಲಿ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದಿದ್ದಕ್ಕಾಗಿ MM ಕೀರವಾಣಿ, ಚಂದ್ರ ಬೋಸ್ ಮತ್ತು ಇಡೀ RRR ತಂಡಕ್ಕೆ ಅಭಿನಂದನೆಗಳು” ಎಂದಿದ್ದಾರೆ.

ಇದೇ ವೇಳೆ ದಿ ಎಲಿಫೆಂಟ್ ವಿಸ್ಪರರ್ಸ್ ತಂಡವನ್ನೂ ಅವರು ಅಭಿನಂದಿಸಿದ್ದಾರೆ, ” ದಿ ಎಲಿಫೆಂಟ್ ವಿಸ್ಪರರ್ಸ್’ ನ ಸಂಪೂರ್ಣ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ಇಬ್ಬರು ಮಹಿಳೆಯರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡ ಎರಡೂ ತಂಡವನ್ನು ಶ್ಲಾಘಿಸಿ ಟ್ವೀಟ್​ ಮಾಡಿದ್ದಾರೆ. ಇವರು ಭಾರತವನ್ನು ಉನ್ನತ ಮಟ್ಟಕ್ಕೆ ಕರೆದೊಯ್ದರು ಎಂದು ಶ್ಲಾಘಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular