HomeKarnatakaBIG NEWS: ಈ ಕಾರಣಕ್ಕೆ ಅವರು ನಮ್ಮ ಸ್ನೇಹಿತರು ಎಂದಿರಬಹುದು; ಸೋಮಣ್ಣ ಪಕ್ಷ ಬಿಡುವ ಪ್ರಶ್ನೆಯೇ...

BIG NEWS: ಈ ಕಾರಣಕ್ಕೆ ಅವರು ನಮ್ಮ ಸ್ನೇಹಿತರು ಎಂದಿರಬಹುದು; ಸೋಮಣ್ಣ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದ ಸಿಎಂ

ಕೊಪ್ಪಳ: ನಮ್ಮದು ಹಾಗೂ ಸೋಮಣ್ಣ ಅವರದ್ದು 35 ವರ್ಷಗಳ ಸಂಬಂಧ. ಸಚಿವ ಸೋಮಣ್ಣ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಸಚಿವ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹಾಗೂ ಡಿಕೆಶಿ, ಸಿದ್ದರಾಮಯ್ಯ ನನ್ನ ಸ್ನೇಹಿತರು ಎಂಬ ಹೇಳಿಕೆ ಬಗ್ಗೆ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸೋಮಣ್ಣ ಹಿಂದೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಜೊತೆ ಕೆಲಸ ಮಾಡಿದವರು. ಈ ಕಾರಣಕ್ಕೆ ಅವರು ನಮ್ಮ ಸ್ನೇಹಿತರು ಎಂದು ಹೇಳಿರಬಹುದು ಅದನ್ನೇ ಬೇರೆ ಅರ್ಥದಲ್ಲಿ ಮಾತನಾಡುವುದು ಸರಿಯಲ್ಲ ಎಂದರು.

ಸಚಿವ ಸೋಮಣ್ಣ ಬಿಜೆಪಿಯಲ್ಲಿಯೇ ಇರ್ತಾರೆ, ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular