ಅದು ಕಣಿವೆಗಳಿಂದ ಸುತ್ತುವರೆದ ರಾಜ್ಯ, ಹಿಮದ ಹೊದಿಕೆ ಹೊದ್ದು ಮಲಗಿರುವ ಪ್ರದೇಶ. ಇವುಗಳ ಮಧ್ಯದಲ್ಲೇ ಪ್ರಶಾಂತವಾಗಿ ಹರಿಯುತ್ತಿರುವ ದಾಲ್ ಸಹೋವರ. ಇದೆಲ್ಲದರ ನಡುವೆಯೇ ಈಗ ಅರಳುತ್ತಿದೆ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ . ಈ ಗಾರ್ಡನ್ ಇದೇ ಮಾರ್ಚ್‌ನ 19ರಂದು ಉದ್ಘಾಟನೆಗೊಳ್ಳಲಿದೆ. ಸಿರಾಜ್ ಬಾಗ್ ಎಂದೂ ಕರೆಯಲ್ಪಡುವ ಈ ಉದ್ಯಾನವ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.
ಈ ಟುಲಿಪ್ ಉದ್ಯಾನವನದಲ್ಲಿ ಏನಿಲ್ಲ ಅಂದರೂ 1.5 ಮಿಲಿಯನ್ ಟುಲಿಪ್ ಗಳಲ್ಲದೆ, ಇತರ ವಸಂತ ಹೂವುಗಳಾದ ಹಯಸಿಂತ್‌ಗಳು, ಡ್ಯಾಫಡಿಲ್‌ಗಳು, ಮಸ್ಕರಿ ಮತ್ತು ಸೈಕ್ಲಾಮೆನ್ನಂಗರ ವಿಭಿನ್ನ ಪ್ರಜಾತಿಯ ಗಿಡಗಳನ್ನ ನೋಡಬಹುದು. ಇದೇ ಗಿಡಗಳ ಮದ್ಯದಲ್ಲೇ ಕಾರಂಜಿ ಗಳನ್ನು ನೋಡಬಹುದಾಗಿದೆ.
“ಈ ಉದ್ಯಾನವು 1,050 ಕನಾಲ್ (52.5 ಹೆಕ್ಟೇರ್)ಗಳಲ್ಲಿ ಹರಡಿದೆ. ಇದು 50,000 ಟುಲಿಪ್ ಹೂಗಳೊಂದಿಗೆ ಪ್ರಾರಂಭವಾಯಿತು. ನಂತರ 3.5 ಲಕ್ಷ ಟುಲಿಪ್ಸ್ ಮತ್ತು ಈಗ ನಮ್ಮಲ್ಲಿ 15 ಲಕ್ಷ ಹೂವುಗಳಿವೆ. ಸ್ಥಳೀಯರು ಮತ್ತು ಹೊರಗಿನವರು ಈ ಉದ್ಯಾನಕ್ಕೆ ಭೇಟಿ ನೀಡುವಂತೆ ನಾವು ವಿನಂತಿಸುತ್ತೇವೆ. ಮಾರ್ಚ್ 19 ರಂದು ಇದನ್ನು ಸಾರ್ವಜನಿಕರಿಗೆ ತೆರೆಯಲಾಗುವುದು” ಎಂದು ಮುಖ್ಯ ತೋಟಗಾರ ಗುಲಾಂ ಹಾಸನ್ ಹೇಳಿದ್ದಾರೆ.
ಈ ಹಿಂದೆ ಸಿರಾಜ್ ಬಾಗ್ ಎಂದು ಕರೆಯಲ್ಪಡುವ ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಅನ್ನು 2008ರಲ್ಲಿ ಜಮ್ಮು ಮತ್ತು ಕಾಶ್ಮೀರದ ಆಗಿನ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ತೆರೆದಿದ್ದರು.
ಟುಲಿಪ್ ಹೂವು ಮೂರರಿಂದ ಐದು ವಾರಗಳವರೆಗೆ ಮಾತ್ರ ಇರುತ್ತದೆ. ನಾವು ಮಾರ್ಚ್-ಏಪ್ರಿಲ್‌ನಲ್ಲಿ ಹೂಬಿಡುವ ಅವಧಿಗೆ ಉದ್ಯಾನವನ್ನು ಸಿದ್ಧಪಡಿಸಲು ವರ್ಷವಿಡೀ ನಿರತರಾಗಿದ್ದೇವೆ. ಮೇ ಮತ್ತು ಜೂನ್ನಲ್ಲಿ ಹೂ ಕೊಯ್ಲು ಪ್ರಾರಂಭಿಸುತ್ತೇವೆ. ಮಣ್ಣನ್ನು ಅಗೆಯುವುದು ಮತ್ತು ರಸಗೊಬ್ಬರವನ್ನು ಅಕ್ಟೋಬರ್‌ನಲ್ಲಿ ಹಾಕಲಾಗುತ್ತದೆ. ನವೆಂಬರ್‌ನಲ್ಲಿ, ನಾವು ಟುಲಿಪ್ ಬೀಜಗಳನ್ನು ಬಿತ್ತುತ್ತೇವೆ. ವರ್ಷವಿಡೀ ತೋಟಗಾರರು ಇಲ್ಲಿ ಕೆಲಸದಲ್ಲಿ ನಿರತರಾಗಿರುತ್ತಾರೆ” ಎಂದು ಮಿರ್ ಹೇಳಿದ್ದಾರೆ.
“ಟುಲಿಪ್ ಹೂವುಗಳು ಅತ್ಯಂತ ಸೂಕ್ಷ್ಮವಾದ ಹೂವುಗಳಾಗಿವೆ ಮತ್ತು ಕಡಿಮೆ ತಾಪಮಾನದಲ್ಲಿ ಮಾತ್ರ ಅರಳುತ್ತವೆ” ಎಂದು ತೋಟಗಾರರಲ್ಲಿ ಒಬ್ಬರಾದ ಮೊಹಮ್ಮದ್ ಮಕ್ಬೂಲ್ ಹೇಳಿದರು.