![VIRAL: Man removes 'Bengali Baba' posters from Mumbai local train during his travel; internet reacts](https://gumlet.assettype.com/freepressjournal/2023-03/c7be5a20-59fe-4940-9a00-2b62caeed606/Viral_Swarna__85_.png)
ಜಯೇಶ್ ಎಸ್. ಎಂಬ ಟ್ವಿಟರ್ ಬಳಕೆದಾರರು ರೆಡ್ಡಿಟ್ನಲ್ಲಿ ಈ ಪೋಸ್ಟರ್ಗಳನ್ನು ರೈಲ್ವೆಯಲ್ಲಿ ಅಂಟಿಸುವ ವ್ಯಕ್ತಿಯ ಫೋಟೋ ಶೇರ್ ಮಾಡಿದ್ದಾರೆ. ರೈಲಿನಲ್ಲಿ ಸಿಎಸ್ಎಂಟಿ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ತಾವು ಪಯಣಿಸುತ್ತಿದ್ದ ಕೋಚ್ನಲ್ಲಿ ಬೆಂಗಾಲಿ ಬಾಬಾ ಪೋಸ್ಟರ್ಗಳನ್ನು ಅಂಟಿಸುವ ವ್ಯಕ್ತಿಯನ್ನು ಗಮನಿಸಿದಾಗ ಫೋಟೋ ಕ್ಲಿಕ್ಕಿಸಿದ್ದಾರೆ.
ಮಾರ್ಚ್ 10 ರಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನಾನು ಈ ಪೋಸ್ಟರ್ಗಳನ್ನು ಅಲ್ಲಿಯೇ ಹರಿದು ಹಾಕಿದ್ದೇನೆ. ಎಲ್ಲರೂ ಹೀಗೆಯೇ ಮಾಡಬೇಕು ಎಂದಿದ್ದಾರೆ.
“ನಾನು ಇಂದು ಬೆಳಗ್ಗೆ 6 ಗಂಟೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ವ್ಯಕ್ತಿ ಬಂದು ಪೋಸ್ಟರ್ ಅಂಟಿಸಿದ. ಅದನ್ನು ಅವನ ಮುಂದೆಯೇ ಹರಿದು ಹಾಕಿದೆ” ಎಂದು ಹರಿದ ಕಾಗದದ ತುಂಡುಗಳಿಂದ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ. ಇವರ ಕಾರ್ಯಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.