alex Certify ದತ್ತು ನೀಡಿದ್ದರೂ ಜೈವಿಕ ತಾಯಿಗೆ ತನ್ನ ಮಗು ಪಾಲನೆ ಮಾಡುವ ಹಕ್ಕಿದೆ; ಹೈಕೋರ್ಟ್‌ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದತ್ತು ನೀಡಿದ್ದರೂ ಜೈವಿಕ ತಾಯಿಗೆ ತನ್ನ ಮಗು ಪಾಲನೆ ಮಾಡುವ ಹಕ್ಕಿದೆ; ಹೈಕೋರ್ಟ್‌ ಮಹತ್ವದ ತೀರ್ಪು

ದತ್ತು ಸ್ವೀಕರಿಸಿರುವುದು ಅಥವಾ ಪಡೆದಿರುವುದನ್ನ ಸಾಬೀತುಪಡಿಸಲು ವಿಫಲವಾಗಿದ್ದು ಅಂತಹ ಪ್ರಕರಣದಲ್ಲಿ ಜೈವಿಕ ತಾಯಿಗೆ ತನ್ನ ಮಗುವನ್ನು ಪಾಲನೆ ಮಾಡುವ ಹಕ್ಕಿದೆ ಎಂದು ಮುಂಬೈ ನ್ಯಾಯಾಲಯವು ಆದೇಶಿಸಿದೆ.

ಮಗುವನ್ನು ಅದರ ಜೈವಿಕ ಪೋಷಕರಿಗೆ ಹಿಂದಿರುಗಿಸುವಂತೆ ದತ್ತು ಪಡೆದ ದಂಪತಿಗೆ ಈ ಮೂಲಕ ಆದೇಶಿಸಿದೆ.
ಮಗುವಿನ ಪಾಲನೆಯು ದತ್ತು ಪಡೆದ ಪೋಷಕರ ಬಳಿ ಇದೆ ಎಂಬ ಕಾರಣಕ್ಕೆ ಮಗುವನ್ನು ತಮ್ಮೊಂದಿಗೆ ಉಳಿಸಿಕೊಳ್ಳುವ ಯಾವುದೇ ಹಕ್ಕನ್ನು ಅವರಿಗೆ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಸಂದರ್ಭದಲ್ಲಿ ಜೈವಿಕ ತಾಯಿಯು ಮಗುವಿಗೆ ಜನ್ಮ ನೀಡಿದಾಗ ಅವಿವಾಹಿತ ಮಹಿಳೆಯಾಗಿದ್ದರು. ಪರಿಸ್ಥಿತಿಯ ಕಾರಣದಿಂದಾಗಿ, ಅವರು 2021 ರಲ್ಲಿ ಎನ್ ಜಿ ಓ ಗೆ ದತ್ತು ಪಡೆಯಲು ತನ್ನ ಮಗುವನ್ನು ಬಿಟ್ಟುಕೊಟ್ಟರು. ಎನ್ ಜಿ ಓ ಮಗುವನ್ನು ದತ್ತು ತೆಗೆದುಕೊಳ್ಳಲು ದಂಪತಿಯನ್ನು ಪತ್ತೆಹಚ್ಚಿತು. ಆದರೆ ಅಷ್ಟರಲ್ಲಿ ಅದು ಮಗುವನ್ನು ಮಾರಾಟ ಮಾಡುವ ದಂಧೆ ಎಂದು ಮಹಿಳೆಗೆ ಅರಿವಾಯಿತು.

ಈ ಸಮಯದಲ್ಲಿ ಆಕೆ ಮಗುವಿನ ಜನನಕ್ಕೆ ಕಾರಣನಾದ ವ್ಯಕ್ತಿಯನ್ನ ಮದುವೆಯಾಗಿ, ಮಗುವನ್ನ ಮರಳಿ ಪಡೆಯಲು ಯತ್ನಿಸುತ್ತಿದ್ದಳು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...