HomeEntertainmentಸಂಗೀತ ಕಛೇರಿಯಲ್ಲಿ ಚಿಂದಿ ಉಡಾಯಿಸಿದ ಯೋ ಯೋ ಹನಿ ಸಿಂಗ್​: ವಿಡಿಯೋ ವೈರಲ್​

ಸಂಗೀತ ಕಛೇರಿಯಲ್ಲಿ ಚಿಂದಿ ಉಡಾಯಿಸಿದ ಯೋ ಯೋ ಹನಿ ಸಿಂಗ್​: ವಿಡಿಯೋ ವೈರಲ್​

ಖ್ಯಾತ ರ‍್ಯಾಪರ್ ಯೋ ಯೋ ಹನಿ ಸಿಂಗ್ ಅವರು ಸಂಗೀತ ಕಛೇರಿಯೊಂದರಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಭಾರಿ ವೈರಲ್​ ಆಗಿದೆ. ಈ ವಿಡಿಯೋವನ್ನು ಮೂಲತಃ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈಗ ಯೂಟ್ಯೂಬ್‌ನಲ್ಲಿಯೂ ಭಾರಿ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದ ನಂತರ ಯೋ ಯೋ ಹನಿ ಸಿಂಗ್ ಅಭಿಮಾನಿಗಳು ಅವರನ್ನು ಹೀರೋ ಎಂದು ಕರೆಯುತ್ತಿದ್ದಾರೆ.

ಈಗ ವೈರಲ್ ಆಗಿರುವ ವೀಡಿಯೊವನ್ನು ಮಯಾಂಕ್ ನಥೋಲಿಯಾ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ, ಯೋ ಯೋ ಹನಿ ಸಿಂಗ್ ಜೈಪುರದಲ್ಲಿ ಸಂಗೀತ ಕಛೇರಿಯಲ್ಲಿ ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು. ವೇದಿಕೆಯಲ್ಲಿ ಕಲಾವಿದ ಅಲ್ಫಾಜ್ ಮತ್ತು ಹೊಮ್ಮಿ ದಿಲ್ಲಿವಾಲಾ ಕೂಡ ಇದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದ್ದಕ್ಕಿದ್ದಂತೆ, ಇಬ್ಬರು ವ್ಯಕ್ತಿ ವೇದಿಕೆಯ ಮೇಲೆ ಪೊರಕೆ ಹಿಡಿದು ಗುಡಿಸಲು ಬಂದರು. ಹನಿ ಸಿಂಗ್ ಅವರು ಒಬ್ಬಾತನನ್ನು ಹಿಡಿದು ನರ್ತಿಸಲು ತೊಡಗಿ, ಆತನೂ ನರ್ತಿಸುವಂತೆ ಮಾಡಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ವೇದಿಕೆಯ ಮೇಲೆ ಇವರಿಬ್ಬರೂ ಒಟ್ಟಿಗೆ ಕುಣಿದಾಡಿದರೆ, ನೆರೆದಿದ್ದವರು ಹರ್ಷೋದ್ಗಾರ ಮಾಡಿದರು. ಹನಿ ಸಿಂಗ್ ಅವರ ಪ್ರಸಿದ್ಧ ಹಾಡು ಲವ್ ಡೋಸ್ ಅನ್ನು ಪ್ರದರ್ಶಿಸಿದರು. ಇವರ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇವರಿಗಿಂತ ಉತ್ತಮ ಸಂಗೀತ, ನೃತ್ಯ ಮಾಡುವವರು ಯಾರೂ ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

https://www.youtube.com/watch?v=CCaF-rhBNNo&t=22s

For Latest News Updates, Join Our Whatsapp Community🚩
RELATED ARTICLES

Most Popular