ಬೆಂಗಳೂರು: ರೌಡಿ ಶೀಟರ್ ಫೈಟರ್ ರವಿಗೆ ಪ್ರಧಾನಿ ಮೋದಿಯವರು ಕೈಮುಗಿದ ಫೋಟೋ ವೈರಲ್ ಆಗಿದ್ದು, ವಿಪಕ್ಷಗಳು ಬಿಜೆಪಿ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನದೆಸಿದ್ದಾರೆ. ಭ್ರಷ್ಟಾಚಾರವನ್ನೆ ಉಸಿರಾಗಿಸಿಕೊಂಡಿರುವ 40% ಸರ್ಕಾರದಲ್ಲಿ ಭ್ರಷ್ಟರಿಗೆ ರಾಜಮರ್ಯಾದೆ! ಕಳ್ಳರ ಬೆಂಬಲ ಕಳ್ಳರಿಗಷ್ಟೆ ಅಲ್ವೇ? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಪ್ರಧಾನಿಯೇ ರೌಡಿಗೆ ಕೈಮುಗಿಯುವಾಗ ಇವರು ಭ್ರಷ್ಟರಿಗೆ ಬಡ್ತಿ ನೀಡದೆ ಇರುತ್ತಾರ? ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಭ್ರಷ್ಟೋತ್ಸವ ನಡೆಸುತ್ತಿರುವ ಭ್ರಷ್ಟ ಜನತಾ ಪಾರ್ಟಿ! ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ.
ಪ್ರಧಾನಿ ಮೋದಿಯವರೇ, ನಾವು ಎಂದೂ ಯಾರ ಸಾವನ್ನು ಬಯಸುವುದಿಲ್ಲ. ನೀವು ಆರೋಗ್ಯವಾಗಿರಿ. ದೀರ್ಘಾಯುಷಿ ಆಗಿರಿ. ಹಾಗೇನಾದರೂ ನಿಮಗೆ ತೊಂದರೆ ಆದರೆ ಅದಕ್ಕೆ ಇಂತಹ ರೌಡಿ ಶೀಟರ್ ಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ನಿಮ್ಮೆದುರು ತಂದು ನಿಲ್ಲಿಸುವ ನಿಮ್ಮ ಪಕ್ಷದವರೇ ಕಾರಣ. ಇಂತಹವರಿಂದ ಸಾಧ್ಯವಾದಷ್ಟು ದೂರವಿರಿ ಎಂದು ಸಲಹೆ ನೀಡಿದೆ.
ಎಲ್ಲೇ ಹೋದರೂ ಬಿಜೆಪಿಗೆ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತವೆ! ಖಾಲಿ ಕುರ್ಚಿಗಳು ಬಿಜೆಪಿ ನಿರ್ನಾಮದ ಕತೆ ಹೇಳುತ್ತವೆ. ಹಣ ನೀಡಿದರೂ, ಏನೇ ಸರ್ಕಸ್ ಮಾಡಿದರೂ ಬಿಜೆಪಿಯತ್ತ ಜನ ಸುಳಿಯದಿರುವುದು ಮಡುಗಟ್ಟಿದ ಜನಾಕ್ರೋಶಕ್ಕೆ ನಿದರ್ಶನ. ಖಾಲಿ ಕುರ್ಚಿ ಕಂಡು ಯಾತ್ರೆ ಮೊಟಕುಗೊಳಿಸುವುದಕ್ಕಿಂತ ನಾಚಿಕೆಗೇಡು ಇನ್ನೇನಿದೆ ಎಂದು ಟೀಕಿಸಿದೆ.