ವಿಡಿಯೋ: ಶಾರುಖ್‌ ಖಾನ್ ವಾಯ್ಸ್‌ನೋಟ್‌ನೊಂದಿಗೆ ನವವಿವಾಹಿತರಿಗೆ ಶುಭ ಹಾರೈಕೆ

ಮದುವೆ ಸಂದರ್ಭದಲ್ಲಿ ಸೆರೆ ಹಿಡಿಯುವ ಕ್ಷಣಗಳು ಜೀವನ್ಮಾನದುದ್ದಕ್ಕೂ ಸ್ಮರಣೀಯವಾಗುವಂಥವಾಗಿವೆ. ಇತ್ತೀಚೆಗಂತೂ ಮದುವೆ ಸಮಾರಂಭದ ಫೋಟೋಗಳನ್ನು ಸೆರೆ ಹಿಡಿಯಲೆಂದೇ ವಿಶೇಷ ಗಮನ ನೀಡಲಾಗುತ್ತಿದೆ. ಮದುವೆ ಮನೆಯಲ್ಲಿ ಜರುಗುವ ಒಂದೊಂದು ಸುಂದರ ಕ್ಷಣಗಳನ್ನೂ ಫ್ರೇಮ್‌ನಲ್ಲಿ ಸೆರೆ ಹಿಡಿಯಲು ವೃತ್ತಿಪರ ಛಾಯಾಗ್ರಾಹಕರ ದಂಡೇ ನೆರೆದಿರುತ್ತದೆ.

ಡೆಸ್ಟಿನೇಷನ್ ವೆಡ್ಡಿಂಗ್ ಆಯೋಜಕರು ಶೇರ್‌ ಮಾಡಿರುವ ಈ ವಿಡಿಯೋವನ್ನು ಕ್ಲಿಪ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದೆ. ವೇದಿಕೆಯಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿ ಶಾರುಖ್‌ ಖಾನ್‌ರ ಚಿತ್ರ ತೋರುವುದರೊಂದಿಗೆ ಆರಂಭಗೊಳ್ಳುವ ಈ ವಿಡಿಯೋ, “ಎಸ್‌ಆರ್‌ಕೆ ಕಾಲಿಂಗ್. ಹಾಯ್ ಕಿನ್ನರಿ, ಹಾಯ್ ಸಂಜೀತ್‌. ನಾನು ಶಾರುಖ್ ಖಾನ್ ನಿಮ್ಮ ವಿವಾಹಕ್ಕೆ ಶುಭಕಾಮನೆಗಳನ್ನು ಹರಸುತ್ತಿದ್ದೇನೆ. ನಿಮ್ಮಿಬ್ಬರ ಕುಟುಂಬಗಳಿಗೂ ನಮ್ಮ ಪ್ರೀತಿಯನ್ನು ಧಾರೆಯೆರೆದು ಕೊಡಿ. ನನ್ನ ಕಡೆಯಿಂದ ನಮಗೆ ಮತ್ತೊಮ್ಮೆ ಅಪಾರವಾದ ಪ್ರೀತಿಯೊಂದಿಗೆ ಶುಭಕಾಮನೆಗಳು,” ಎಂದು ವಿಶ್ ಮಾಡುವಂತಿದೆ.

ಈ ವಿಡಿಯೋ ಪ್ಲೇ ಆಗುತ್ತಲೇ ರಂಗೇರಿದ ಅತಿಥಿಗಳು, ಶಾರುಖ್‌ರ ಜನಪ್ರಿಯ ಚಿತ್ರವಾದ ’ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೇ’ ಚಿತ್ರದ ’ರುಕ್ ಜಾ ಓ ದಿಲ್ ದಿವಾನೇ’ ಹಾಡಿಗೆ ಕುಣಿದಿದ್ದಾರೆ.

ಶೇರ್‌ ಮಾಡಿದಾಗಿನಿಂದ ಈ ವಿಡಿಯೋಗೆ ಆರು ಲಕ್ಷ ವೀಕ್ಷಣೆಗಳು ಸಂದಾಯವಾಗಿದ್ದು, 64,000 ಲೈಕ್‌ಗಳು ಗಿಟ್ಟಿವೆ.

https://youtu.be/0jQSzvnKu80

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read