HomeCrimeಗರ್ಭ ಧರಿಸಿದ ಒಂಬತ್ತನೇ ತರಗತಿ ವಿದ್ಯಾರ್ಥಿನಿ; ಯುವಕ ಅರೆಸ್ಟ್

ಗರ್ಭ ಧರಿಸಿದ ಒಂಬತ್ತನೇ ತರಗತಿ ವಿದ್ಯಾರ್ಥಿನಿ; ಯುವಕ ಅರೆಸ್ಟ್

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗಿಯೊಬ್ಬಳು ಸಂತ್ರಸ್ತೆಯಾಗಿದ್ದಾಳೆ. ಈ ಸಂಬಂಧ 15 ವರ್ಷ ವಯಸ್ಸಿನ ಹುಡುಗಿಯ ತಾಯಿ ದೂರು ದಾಖಲಿಸಿದ್ದಾರೆ.

ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಲ್ಲಿನ ಪೊಂಭರ್ನಾ ಎಂಬ ಗ್ರಾಮೀಣ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, 9ನೇ ತರಗತಿಯ ವಿದ್ಯಾರ್ಥಿನಿ ದಿಢೀರನೇ ಹೊಟ್ಟೆ ನೋವೆಂದು ಹೇಳಿಕೊಂಡಿದ್ದಾಳೆ. ಈ ವಿಚಾರ ತಿಳಿದು ಶಾಕ್‌ ಆದ ತಾಯಿಗೆ ತನ್ನ ಮಗಳು ಅದೇ ಊರಿನ ವ್ಯಕ್ತಿಯೊಬ್ಬನೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸಂತ್ರಸ್ತರ ದೂರಿನನ್ವಯ ಪೋಕ್ಸೋ ಕಾಯಿದೆ ಅಡಿಯಲ್ಲಿ ಲೋಕೇಶ್ ಚುದ್ರಿ ಎಂಬ 19 ವರ್ಷದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದಿನ ದಿನಗಳಲ್ಲಿ ಅಂತರ್ಜಾಲವಿಲ್ಲದೇ ಬದುಕನ್ನು ಊಹಿಸಲೂ ಸಾಧ್ಯವಿಲ್ಲದಿದ್ದರೂ ಸಹ ಮಕ್ಕಳ ಮನಸ್ಸುಗಳ ಮೇಲೆ ವಿಪರೀತ ಅಂತರ್ಜಾಲದ ಬಳಕೆಯಿಂದಾಗಿ ನಕಾರಾತ್ಮಕ ಪ್ರಭಾವ ಬೀರುತ್ತಿದ್ದು, ಇದರಿಂದ ಅವರ ಜೀವನಗಳು ಹಾಳಾಗುತ್ತಿವೆ ಎಂದು ಪೊಲೀಸರು ಕಳವಳದಿಂದ ನುಡಿದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular