ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಂಡ್ಯ ಮತ್ತು ಧಾರವಾಡದಲ್ಲಿ 25ಕ್ಕೂ ಹೆಚ್ಚು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಬೆಂಗಳೂರು -ಮೈಸೂರು ನಡುವಿನ ರಾಜ್ಯದ ಮೊದಲ ಎಕ್ಸ್ ಪ್ರೆಸ್ ವೇ ಉದ್ಘಾಟಿಸಲಿದ್ದಾರೆ. ಧಾರವಾಡದಲ್ಲಿ ದೇಶದ ಪ್ರಥಮ ಪರಿಸರ ಸ್ನೇಹಿ ಐಐಟಿ ಕ್ಯಾಂಪಸ್ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ ಹುಬ್ಬಳ್ಳಿಯಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರಂ ಕೂಡ ಅನಾವರಣಗೊಳಿಸಲಿದ್ದಾರೆ.
ಬೆಳಗ್ಗೆ 11:25ಕ್ಕೆ ಮಂಡ್ಯಕ್ಕೆ ಆಗಮಿಸಲಿರುವ ಅವರು ಕಟ್ಟೆದೊಡ್ಡಿ ಬಳಿ ಎಕ್ಸ್ಪ್ರೆಸ್ ವೇ ನಲ್ಲಿ 50 ಮೀಟರ್ ದೂರದವರೆಗೆ ನಡೆದು ಹೆದ್ದಾರಿ ವೀಕ್ಷಣೆ ಮಾಡಲಿದ್ದಾರೆ. ಸುಮಾರು 11500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಗೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲು ಪ್ರವಾಸಿ ಮಂದಿರ ಸರ್ಕಲ್ ನಿಂದ ಎಸ್.ಡಿ. ಜಯರಾಮ್ ಸರ್ಕಲ್ ವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಮಧ್ಯಾಹ್ನ ಧಾರವಾಡಕ್ಕೆ ಭೇಟಿ ನೀಡಲಿರುವ ಪ್ರಧಾನಿಗಳು ಐಐಟಿ ನೂತನ ಕ್ಯಾಂಪಸ್ ಲೋಕಾರ್ಪಣೆ ಮಾಡುವರು. ಹುಬ್ಬಳ್ಳಿ ರೈಲ್ವೇ ಪ್ಲಾಟ್ ಫಾರಂ ಉದ್ಘಾಟಿಸಲಿದ್ದಾರೆ.