ಪ್ರೀತಿಸಿದ ಗೆಳತಿ ಶ್ರದ್ಧಾಳನ್ನೇ ರಾಕ್ಷಸನಂತೆ ಕೊಂದು ಹಾಕಿದ್ದ ಅಫ್ತಾಬ್. ಆ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿ ಹೋಗಿಲ್ಲ ಆಗಲೇ ಜಮ್ಮುವಿನಲ್ಲಿ ಇನ್ನೊಂದು ಪ್ರೇಮ್ ಕಹಾನಿ ಸಾವಿನಲ್ಲಿ ಅಂತ್ಯ ಕಂಡಿದೆ.
ಡಾ. ಸುಮೇಧಾ ಮತ್ತು ಜೋಹರ್ ಗನಿ ಕಳೆದ ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಮನಸ್ತಾಪದಿಂದಾಗಿ ಇವರಿಬ್ಬರ ನಡುವೆ ಜಗಳ, ವಾದ-ವಾಗ್ವಾದಗಳು ನಡೆಯುತ್ತಲೇ ಇದ್ದವು.
ಆದರೆ ಮೊನ್ನೆ ಮತ್ತೆ ನಡೆದ ಗಲಾಟೆಯಲ್ಲಿ ತಾಳ್ಮೆ ಕಳೆದುಕೊಂಡ ಜೋಹರ್ ಗನಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿದು ಪ್ರೀತಿಸಿದ ಗೆಳತಿಯನ್ನೇ ಕೊಲೆ ಮಾಡಿದ್ದಾನೆ.
ಆ ನಂತರ ಜೋಹರ್ ಗನಿ, ತಾನು ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಮೆಸೇಜ್ ಪೋಸ್ಟ್ ಮಾಡಿದ್ದಾನೆ. ಇದೇ ಪೋಸ್ಟ್‌ನ್ನ ಓದಿದಾಕ್ಷಣ, ಜೋಹರ್ ಸಂಬಂಧಿಕರು ಪೊಲೀಸರಿಗೆ ವಿಷಯ ತಿಳಿಸಿದ್ಧಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಜೋಹರ್ ಮನೆಗೆ ದೌಡಾಯಿಸಿ ಬಂದಿದ್ದಾರೆ.
ಅಲ್ಲಿ ಹೋದಾಗ ಜೋಹರ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣವೇ ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯಕ್ಕೆ ಜೋಹರ್ ಚೇತರಿಸಿಕೊಂಡಿದ್ದು, ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆ ಸಮಯದಲ್ಲೇ ಜೋಹರ್ ಬಾಯ್ಬಿಟ್ಟ ಸತ್ಯ ಒಂದು ಅಲ್ಲಿದ್ದವರೆಲ್ಲ ಹೌಹಾರುವಂತೆ ಮಾಡಿತು.
ಡಾ. ಸುಮೇಧಾ ಹಿಂದು ಧರ್ಮದವರಾಗಿದ್ದು, ಜೋಹರ್ ಮುಸ್ಲಿಂ ಧರ್ಮಕ್ಕೆ ಸೇರಿದವನಾಗಿದ್ದಾನೆ. ವೈದ್ಯೆ ಸುಮೇಧಾ ದೆಹಲಿಯಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ಹೋಳಿ ಹಬ್ಬದ ಪ್ರಯುಕ್ತ ಜಮ್ಮುವಿನ ತಲಾಬ್ ಟಿಲ್ಲೋದಲ್ಲಿದ್ದ ತಮ್ಮ ಮನೆಗೆ ಹೋಗಿದ್ದರು.
ಅಲ್ಲಿಂದ ಕೆಲವೇ ಕೆಲವು ಕಿಲೋ ಮೀಟರ್ ದೂರದ ಜಾನಿಪುರದ ಪಂಪೋಶ್ ಕಾಲೋನಿಯಲ್ಲಿ ಜೋಹರ್ ವಾಸಿಸುತ್ತಿದ್ದ. ಬಿಡುವಿನ ಸಮಯದಲ್ಲಿ ಗೆಳೆಯ ಜೋಹರ್ನನ್ನ ಭೇಟಿಯಾಗಲು ಹೋದಾಗ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೊನೆಯಲ್ಲಿ ಜೊಹರ್ ಚಾಕು ಇರಿದು ಕೊಂದು ಹಾಕಿರುವ ಸತ್ಯವನ್ನ ಬಾಯ್ಬಿಟ್ಟಿದ್ದ. ಸದ್ಯಕ್ಕೆ ಆತನ ವಿರುದ್ಧ ಎಫ್ಐಆರ್ ದಾಖಲಾಗಿದ್ದು. ಇನ್ನಷ್ಟು ವಿಚಾರಣೆಗೆ ಒಳಪಡಿಸಲಾಗಿದೆ.