HomeKarnatakaBIG NEWS: ಯಾರದ್ದೋ ಕೂಸನ್ನು ಹೆಚ್.ಡಿ.ದೇವೇಗೌಡರು ತಮ್ಮದೆನ್ನುತ್ತಿದ್ದಾರೆ; ಮಾಜಿ ಸಚಿವ ಈಶ್ವರಪ್ಪ ವ್ಯಂಗ್ಯ

BIG NEWS: ಯಾರದ್ದೋ ಕೂಸನ್ನು ಹೆಚ್.ಡಿ.ದೇವೇಗೌಡರು ತಮ್ಮದೆನ್ನುತ್ತಿದ್ದಾರೆ; ಮಾಜಿ ಸಚಿವ ಈಶ್ವರಪ್ಪ ವ್ಯಂಗ್ಯ

ಮಡಿಕೇರಿ: ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ವಾರ್ ಮುಂದುವರೆದಿದ್ದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಮಡಿಕೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ದಶಪಥ ರಸ್ತೆ ಕ್ರೆಡಿಟ್ ಬಿಜೆಪಿಗೆ ಸಲ್ಲಬೇಕು ಎಂದಿದ್ದಾರೆ. ದಶಪಥ ರಸ್ತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕನಸಿನ ಕೂಸು ಎಂದು ಜೆಡಿಎಸ್ ಜಾಹೀರಾತು ನೀಡಿರುವ ವಿಚಾರವಾಗಿ ಕಿಡಿಕಾರಿರುವ ಈಶ್ವರಪ್ಪ, ಯಾರಿಗೋ ಹುಟ್ಟಿದ ಕೂಸನ್ನು ದೇವೇಗೌಡರು ತಮ್ಮದೆನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಾರದ್ದೋ ಕೂಸನ್ನು ತನ್ನದೆನ್ನುತ್ತಿರುವ ದೇವೇಗೌಡರು ಮೊದಲು ಅವರ ಕೂಸು ಯಾವುದು ಎಂಬುದನ್ನು ಅರಿತುಕೊಳ್ಳಲಿ ಎಂದು ಟೀಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲಿ ಈ ಬಾರಿ ಬಿಜೆಪಿ ಸಂಪೂರ್ಣ ಬಹುಮತದಿಂದ ಗೆದ್ದು ಮತ್ತೊಮ್ಮೆ ಸರ್ಕಾರ ರಚನೆ ಮಾಡುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular