alex Certify ಶಾಲೆಯಲ್ಲಿ ಫೋಲಿಕ್ ಆಸಿಡ್, ಕಬ್ಬಿಣಾಂಶ ಮಾತ್ರೆ ಸೇವಿಸಿದ್ದ ಬಾಲಕಿ ಸಾವು: ಬೆಟ್ಟಿಂಗ್ ಕಟ್ಟಿ 45 ಮಾತ್ರೆ ನುಂಗಿದ್ದ ಹುಡುಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಯಲ್ಲಿ ಫೋಲಿಕ್ ಆಸಿಡ್, ಕಬ್ಬಿಣಾಂಶ ಮಾತ್ರೆ ಸೇವಿಸಿದ್ದ ಬಾಲಕಿ ಸಾವು: ಬೆಟ್ಟಿಂಗ್ ಕಟ್ಟಿ 45 ಮಾತ್ರೆ ನುಂಗಿದ್ದ ಹುಡುಗಿ

ತಮಿಳುನಾಡಿನ ನೀಲಗಿರಿಯ ಉದಗಮಂಡಲಂ ಪುರಸಭೆಯ ಉರ್ದು ಮಿಡಲ್ ಸ್ಕೂಲ್‌ನಲ್ಲಿ 13 ವರ್ಷದ ವಿದ್ಯಾರ್ಥಿನಿ ಬೆಟ್ಟಿಂಗ್‌ ಗಾಗಿ ಹೆಚ್ಚು ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದೆ.

ವಿದ್ಯಾರ್ಥಿನಿ ಜೈಬಾ ಫಾತಿಮಾ ಮೃತಪಟ್ಟ ಬಾಲಕಿ. ಯಕೃತ್ತಿನ ವೈಫಲ್ಯಕ್ಕೆ ಒಳಗಾಗುವ ಮೊದಲು ಸುಮಾರು 45 ಮಾತ್ರೆ ಸೇವಿಸಿದ್ದಾಳೆ. ಸ್ನೇಹಿತರ ನಡುವೆ ಬಾಜಿ ಕಟ್ಟಿಕೊಂಡ ಪರಿಣಾಮ ಫಾತಿಮಾ ಸೇರಿದಂತೆ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಸೋಮವಾರ ಮಾತ್ರೆ ಸೇವಿಸಿದ್ದಾರೆ. ಫಾತಿಮಾ ಹೆಚ್ಚು ಮಾತ್ರೆ ತೆಗೆದುಕೊಂಡಿದ್ದಳು ಎನ್ನಲಾಗಿದೆ.

ಫಾತಿಮಾ ಮತ್ತು ಇತರ ಐದು ವಿದ್ಯಾರ್ಥಿಗಳು ತಮ್ಮ ಮುಖ್ಯೋಪಾಧ್ಯಾಯರ ಕಚೇರಿಗೆ ಹೋಗಿ ಅಲ್ಲಿದ್ದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಸಪ್ಲಿಮೆಂಟೇಶನ್(WIFS) ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ ನೀಡಬೇಕಾದ ಮಾತ್ರೆಗಳ ಪ್ಯಾಕೇಟ್ ತೆಗೆದುಕೊಂಡಿದ್ದಾರೆ.

ಯಾರು ಹೆಚ್ಚು ಮಾತ್ರೆ ತೆಗೆದುಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳ ನಡುವೆ ಪೈಪೋಟಿ ನಡೆದು ಫಾತಿಮಾ ಸರಿಸುಮಾರು 45 ಮಾತ್ರೆಗಳನ್ನು ಸೇವಿಸಿದರೆ, ಅವಳೊಂದಿಗೆ ಇದ್ದ ಇತರ ಮೂವರು ಹುಡುಗಿಯರು ಮತ್ತು ಇಬ್ಬರು ಹುಡುಗರು ತಲಾ ಕನಿಷ್ಠ 10 ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಹೇಳಿದ್ದಾರೆ.

ವಿದ್ಯಾರ್ಥಿಗಳನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ(CMCH) ಕಳುಹಿಸುವ ಮೊದಲು ಉದಗಮಂಡಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. CMCH ಆಡಳಿತದ ಪ್ರಕಾರ, ಫಾತಿಮಾಗೆ ಗಂಭೀರವಾದ ಯಕೃತ್ತು ಹಾನಿಯಾಗಿದೆ ಮತ್ತು ತಕ್ಷಣವೇ ಯಕೃತ್ತಿನ ಕಸಿ ಅಗತ್ಯವಿದೆ ಎಂದು ನಿರ್ಧರಿಸಿದ ನಂತರ ಚೆನ್ನೈನ ಸ್ಟಾನ್ಲಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು.

ಆಕೆಯನ್ನು ಸೇಲಂನ ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತು, ಆದರೆ ಅಲ್ಲಿ ಆಕೆಯ ಆರೋಗ್ಯ ಹದಗೆಟ್ಟಿದ್ದರಿಂದ, ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಮಾತ್ರೆ ವಿತರಣೆಯ ಉಸ್ತುವಾರಿ ವಹಿಸಿರುವ ಶಿಕ್ಷಕರನ್ನು ಶಾಲಾ ಶಿಕ್ಷಣ ಇಲಾಖೆಯು ಅಮಾನತುಗೊಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...