ರೈಲಿನಲ್ಲಿ ಪ್ರಯಾಣ ಮಾಡುವುದೇ ಒಂದು ಅದ್ಭುತ ಅನುಭವ. ಬಸ್, ವಿಮಾನಗಳಲ್ಲಿ ನೋಡಲು ಸಾಧ್ಯವಾಗದಂತಹ ರಮಣೀಯ ದೃಶ್ಯಗಳನ್ನ, ರೈಲು ಪ್ರಯಾಣದ ವೇಳೆಯಲ್ಲಿ ನೋಡಬಹುದು. ಒಂದು ಕಾಲದಲ್ಲಿ ಹೊಗೆಯುಗುಳುತ್ತ, ಚುಕುಬುಕು ಅಂತ, ಹಳಿಗಳ ಮೇಲೆ ಓಡ್ತಿದ್ದ ರೈಲು, ಈಗ ಬುಲೆಟ್ಗಿಂತಲೂ ವೇಗವಾಗಿ ಓಡುವಷ್ಟು ಸಾಮರ್ಥ್ಯ ಹೊಂದಿದೆ. ಅಂತಹದ್ದೇ ರೈಲಿನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾರಿನ ಡ್ರೈವಿಂಗ್ ಸೀಟ್ ಮೇಲೆ ಕುಳಿತ ವ್ಯಕ್ತಿಗೆ ಡ್ರೈವರ್ ಅಂತ ಹೇಳಲಾಗುತ್ತೆ. ಅದೇ ರೀತಿ ರೈಲಿನ ಚಾಲಕನ ಸ್ಥಾನದಲ್ಲಿ ಕುಳಿತುಕೊಳ್ಳುವ ವ್ಯಕ್ತಿಗೆ ಇಂಜಿನ್ಮ್ಯಾನ್ ಅಥವಾ ಲೊಕೊಮೊಟಿವ್ ಡ್ರೈವರ್ ಎಂದು ಕರೆಯಲಾಗುತ್ತೆ. ಲೋಕೊಮೊಟಿವ್ ಪ್ರತಿನಿತ್ಯ ತಾವು ಪಯಣಿಸುವ ದಾರಿ ಎಷ್ಟು ಜಟಿಲವಾಗಿರುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದನ್ನ ಮಾಡಿದ್ದಾರೆ. ಅದು ಕತ್ತಲಿನ ರಾತ್ರಿಯಲ್ಲಿ, ಇಕ್ಕಟ್ಟಾದ ದಾರಿಯಲ್ಲಿ ರೈಲು ಅತೀ ವೇಗದಲ್ಲಿ ಚಲಿಸುತ್ತಿರುತ್ತೆ. ಇರುತ್ತೆ. ಅದು ನೋಡುವುದಕ್ಕೆ ಬ್ರೇಕ್ ಫೇಲ್ ಆದ ಹಾಗೆ ಕಾಣಿಸುತ್ತೆ. ಅಸಲಿಗೆ ಆ ಸಮಯದಲ್ಲಿ ರೈಲು ಓಡುವುದೇ ಅಷ್ಟು ವೇಗವಾಗಿ. ಈ ವೀಡಿಯೋ ನೋಡಿದ್ರೆ ಎಂಥವರೂ ಕೂಡ ಬೆಚ್ಚಿಬೀಳುವ ಹಾಗಿದೆ.
ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋವನ್ನ ಈಗಾಗಲೇ, 2 ಮಿಲಿಯನ್ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. Shen Shiwel ಅನ್ನುವವರು ನಾನು ಭಾರೀ ಹಿಮದ ನಡುವೆ ರೈಲು ಚಾಲಕ, ರೈಲು ಚಲಿಸುವ ಪರಿ ನೋಡುವುದೇ ಅದ್ಭುತ’ driptape.eth ಅನ್ನುವವರು ರೈಲನ್ನ ಇಷ್ಟು ವೇಗವಾಗಿ ಓಡಿಸುವುದು ಹುಚ್ಚುತನ’ ಎಂದು ಹೇಳಿದ್ದಾರೆ. ಆದರೆ MechEnginzer26 ಈ ರೀತಿಯ ರೈಲಿನಲ್ಲಿ ಪ್ರಯಾಣ ಮಾಡುವುದೇ ನನ್ನ ಮುಂದಿನ ಆಸೆ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಮತ್ತೆ Trayvonee ಅನ್ನುವವರು ‘ಇದೊಂದು ಸುಂದರ ಮತ್ತು ಭಯಾನಕ ಅನುಭವ’ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ಅನುಭವವನ್ನ ಹಂಚಿಕೊಂಡಿದ್ದಾರೆ.