ಬೈಕ್ ಚಾಲನೆ ವೇಳೆ ರೀಲ್ಸ್ ಮಾಡ್ತಿದ್ದ ಯುವಕರು ಮಹಿಳೆಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ 31 ವರ್ಷದ ಮಹಿಳೆಯ ಪ್ರಾಣ ಹೋಗಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪುಣೆ ನಗರದ ಮೊಹಮ್ಮದ್ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆ ತಸ್ಲೀಂ ಪಠಾಣ್ ಅವರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ನಂತರ ಆರೋಪಿಗಳಾದ ಅಯಾನ್ ಶೇಖ್ ಮತ್ತು ಜಾಯೇದ್ ಜಾವೇದ್ ಶೇಖ್ ಸ್ಥಳದಿಂದ ಪರಾರಿಯಾಗಿದ್ದಾರೆ.
ಆರೋಪಿ ಅಯಾನ್ ಮೋಟಾರ್ ಸೈಕಲ್ ಓಡಿಸುತ್ತಿದ್ದ ಮತ್ತು ಜಾಯೆದ್ ಹಿಂದೆ ಕುಳಿತು ವೀಡಿಯೊ ರೀಲ್ ಅನ್ನು ಚಿತ್ರೀಕರಿಸುತ್ತಿದ್ದರು.
ಇವರ ದ್ವಿಚಕ್ರ ವಾಹನವು ತಸ್ಲೀಂ ಪಠಾಣ್ ಅವರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ವಾನ್ವಾಡಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಜಯವಂತ್ ಜಾಧವ್ ಹೇಳಿದ್ದಾರೆ.
ಆರೋಪಿಗಳ ಗುರುತು ದೃಢಪಡಿಸಿದ ನಂತರ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.