HomeKarnatakaBIG NEWS: ಕಾಂಗ್ರೆಸ್ ಯೋಜನೆಗಳಿಗೆ ಟಕ್ಕರ್ ಕೊಟ್ಟ ಜನಾರ್ಧನ ರೆಡ್ಡಿ; KRPP ಪ್ರಣಾಳಿಕೆ ಬಿಡುಗಡೆ; ಇಂದಿನಿಂದ...

BIG NEWS: ಕಾಂಗ್ರೆಸ್ ಯೋಜನೆಗಳಿಗೆ ಟಕ್ಕರ್ ಕೊಟ್ಟ ಜನಾರ್ಧನ ರೆಡ್ಡಿ; KRPP ಪ್ರಣಾಳಿಕೆ ಬಿಡುಗಡೆ; ಇಂದಿನಿಂದ ನನ್ನ ಬೇಟೆ ಆರಂಭ ಎಂದು ಶಪಥ

ಕೊಪ್ಪಳ; ಕೆಲ ಹುಚ್ಚು ರಾಜಕಾರಣಿಗಳು ರೆಡ್ದಿ 12 ವರ್ಷಗಳಿಂದ ಮನೆಯಲ್ಲಿದ್ದಾನೆ. ಆತನ ರಾಜಕಾರಣ ಮುಗಿದಿದೆ ಎಂದು ಹೇಳುತ್ತಿದ್ದರು ಇಂದಿನಿಂದ ನನ್ನ ಬೇಟೆ ಆರಂಭವಾಗುತ್ತೆ ಎಂದು ಗಾಲಿ ಜನಾರ್ಧನ ರೆಡ್ಡಿ ಶಪಥ ಮಾಡಿದ್ದಾರೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಸ್ಥಾಪಿಸಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಗಾಲಿ ಜನಾರ್ಧನ ರೆಡ್ಡಿ, ಹುಲಿ ಯಾವತ್ತು ಹುಲಿನೆ. ಅದು ಬೋನಿನಲ್ಲಿರಲಿ, ಜೈಲಿನಲ್ಲಿರಲಿ ಹುಲಿ ಹುಲಿಯೇ. ಹುಲಿ ಯಾವತ್ತೂ ಸಣ್ಣಪುಟ್ಟ ಬೇಟೆಯಾಡಲ್ಲ, ಕಾದುನೋಡಿ ದೊಡ್ಡ ಬೇಟೆಯಾಡುತ್ತೆ. ಹಾಗೇ ಇಂದಿನಿಂದ ನನ್ನ ಬೇಟೆ ಆರಂಭವಾಗಲಿದೆ ಎಂದು ಗುಡುಗಿದ್ದಾರೆ.

ಇದೇ ವೇಳೆ ಕೆ ಆರ್ ಪಿ ಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ಧನ ರೆಡ್ಡಿ, ಕಾಂಗ್ರೆಸ್ ಪ್ರಣಾಳಿಕೆಗೆ ಟಕ್ಕರ್ ಕೊಡುವ ಯೋಜನೆ ಪ್ರಕಟಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆ ಆರ್ ಪಿಪಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 2,500 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ಸ್ತ್ರೀ ಶಕ್ತಿ ಸಂಘಟನೆಗಳಿಗೆ 10 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ, ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರಕ್ಕೂ ಹೆಚ್ಚು ವೇತನ ನೀಡುವುದಾಗಿ ಘೋಷಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular